ಅನುರಾಗದ ಅಲೆ

ಕತ್ತಲೆ ಕವಿದ ಈ ಮನವು
ದಿಕ್ಕನ್ನು ತೋಚದೆ ಹೊರಟಾಗ
ನಿಸರ್ಗದ ಮಡಿಲು ಕರೆದಿತ್ತು
ಅಲೆಗಳ ಅಬ್ಬರ ಜೋರಿತ್ತು
ಮೆಲ್ಲನೆ ಗಾಳಿಯು ಬೀಸಿತ್ತು
ನಿನ್ನ ಭೇಟಿಯ ಜಾಗವು ಅಲ್ಲಿತ್ತು
ನಿನ್ನ ಬಿಂಬದ ಚಿತ್ರವು ಬಿಡಿಸಿತ್ತು
ಆ ಚಿತ್ರಕ್ಕೆ ಉಸಿರನ್ನು ತುಂಬಿತ್ತು
ಪಕ್ಕಕ್ಕೆ ನನ್ನನ್ನು ಸರಿಸಿತ್ತು
ಕತ್ತಲೆ ಕವಿದ ಈ ಮನದಿ
ಅನುರಾಗದ ಅಲೆಯು ಉಕ್ಕಿತ್ತು

ಜಯಾ ಪಿ

- Jaya

06 May 2023, 01:48 pm
Download App from Playstore: