ಹಗಲಿರುಳ ತಿರುಳ ತಿಳಿಯೋ ನೀ ದುರುಳ...

ಕತ್ತಲು ಬೆಳಕೊಳಗಿದೆ,
ಬೆಳಕು ಕತ್ತಲೊಳಗಿದೆ,
ಕತ್ತಲು ಬಂದಾಗ ಬೆಳಕು ಮರೆಯಾಗಿದೆ,
ಬೆಳಕು ಬಂದಾಗ ಕತ್ತಲು ಮರೆಯಾಗಿದೆ,
ಇರುವ ರವಿ ಅಲ್ಲೇ ಇರುವಲ್ಲೇ,
ಅಲೆವ ಶಶಿ ರವಿ ಇರುವಲ್ಲಿ,
ಹಗಲಲ್ಲೂ ಶಶಿ ಇರುವ ಮರೆಯಾಗಿರುವ,
ಇರುಳಲ್ಲೂ ರವಿ ಇರುವ ಮರೆಯಾಗಿರುವ,
ಹಗಲಿರುಳ ತಿರುಳ ತಿಳಿಯೋ ನೀ ದುರುಳ,
ತಿಳಿದವರಿಲ್ಲಿ ಇಹರು ವಿರಳಾತಿ ವಿರಳ,
ಅವರಿವರ ಸೊಲ್ಲ ಬಲ್ಲವರಿಲ್ಲಿ ಬಹಳ,
ಆದರವರದೇ ಅಂತರಾಳ ತಿಳಿಯದವರೇ ಹೇರಳ,
ನಿನ್ನಂತರಂಗದಲಿ ಕಾರ್ಮೋಡ ಕವಿದಿದೆ,
ಅದೇ ಅಂತರಂಗದಲಿ ದಿವ್ಯ ಜ್ಯೋತಿ ಬೆಳಗುತಿದೆ,
ಅಂತರಂಗ ಬಹಿರಂಗ ಅದು ಬೇರಿಲ್ಲ ನೀ ಕೇಳ,
ನಿನ್ನ ಮನದ ಮಾತು, ಅದ ಒಮ್ಮೆ ನೀ ಕೇಳ.....

----- tippu -----

- tippu

19 Mar 2023, 10:45 pm
Download App from Playstore: