ಬೆಳದಿಂಗಳ ಬೆಳ್ಳಿ

ಬೆಳದಿಂಗಳ ಬೆಳ್ಳಿ


ಬೆಳ್ಳಿಯ ಮೋಡದ ತೆರೆಯಲ್ಲಿ 

ಚಲುವ ಚಪಲ ಚೆನ್ನಿಗನೆ ಚಿನ್ನ

ಅವನೇ ನಮ್ಮ ಚಂದಿರಣ್ಣ.


ಮಂದಸ್ಮಿತ ಮುಖದ ಚೆನ್ನ 

ಬರುವ ನೋಡಿ ಹದಿನೈದು ದಿನಗಳೊಮ್ಮೆ.

ಅವನೇ ನಮ್ಮ ಚಂದಿರಣ್ಣ.


ತಾರೆಗಳ ಲಲನೆ ತೋರಣದಿ ಮಧ್ಯ 

ಕಂಗೊಳಿಸುವ ಕಣ್ಮನಿ

ಅವನೇ ನಮ್ಮ ಚಂದಿರಣ್ಣ.


ಅಂಬರವೇರಿ‌‌ ಸುಂದರ ಮೊಗದಿ 

ನಂದಾ ದೀಪದ ನಂದನ ವನದಿ ನಗುತಿಹನು

ಅವನೇ ನಮ್ಮ ಚಂದಿರಣ್ಣ.


ನೀರಿನ‌ ಎಡೆಗೆ ಮುಖ ತೊಳೆಯಲು 

ಬಂದಿಹ ಚಂದಿರ.

ತಿಳಿ ನೀರನಲ್ಲಿ ತನ್ನಯ ಅಂದವ ಕಂಡ 

ಮೂಕಸ್ಮಿತನಾಗಿಹನು 

ಅವನೇ ನಮ್ಮ ಚಂದಿರಣ್ಣ.


ಭೂತಾಯಿ ಮೂಗಿನ ನತ್ತಿನಂತೆ

ಕಂಗೊಳಿಸುವ ಅಮೂಲ್ಯವಾದ ಆಭರಣ

ಅವನೇ ನಮ್ಮ ಚಂದಿರಣ್ಣ.


—ದಸ್ತಗೀರ ನದಾಫ್, ಬೆಳಗಾವಿ

ಮೊ ಸಂ:-9740426796


- DASTAGEER NADAF

14 Mar 2023, 10:04 pm
Download App from Playstore: