ವಿಧಿಯಾಟ

ಅನುಭವಿಸು ಪ್ರತಿಕ್ಷಣವ
ಸಂಭ್ರಮಿಸು ಜೀವನವ
ತಿಳಿದಿಹರಾರಿಲ್ಲಿ ನಿನಗೆ
ನಿಗದಿಯಾದ ಸಮಯವ.?

ನಿನ್ನೆ ಇದ್ದ ಶಬ್ದ ಇಂದು ಸ್ಥಬ್ದ
ಮುಪ್ಪಲ್ಲದ ಚರ್ಮಕೂ ಉಪ್ಪಿನ ಉಡುಗೆ
ಕಲ್ಲಿನಂತ ದೇಹಕೂ ಮಣ್ಣಿನ ಹಾಸಿಗೆ
ಸಲಹಿದ ತನುವೆಲ್ಲಾ ಗೆದ್ದಲು ಹುಳುವಿನ ಪಾಲಿಗೆ

ಕೋಟಿ ಕನಸುಗಳ ಕಾಣುವ ಮನವೆ ಕೇಳು
ಕಾಲ ಬಂದಾಗ ಎಲ್ಲವ ತೊರೆದು ಓಟ ಕೀಳು
ಹಗುರವಿರಲಿ ಹೊರುವ ಕನಸುಗಳ ಬುತ್ತಿ
ತೆರಳದಿರಲಿ ಆತ್ಮ ನಿರಾಸೆಯ ಹೊತ್ತು..

ಡಾ. ಅನಿಲ್..

- anil

13 Mar 2023, 11:35 am
Download App from Playstore: