ಬದಲಾಗಬೇಕಿದೆ
ನೋವನ್ನುಂಡು ಸಂತಸದ ಕಂಪನ್ನು ಹರಡಿಸಿ
ಮಮತೆಯ ಮಳೆಯನ್ನು ಸುರಿಸುವಳು ಹೆಣ್ಣು
ಅಮ್ಮನಾಗಿ, ಅಕ್ಕ,ತಂಗಿ,ಹೆಂಡತಿಯಾಗಿ
ಬದುಕಿನ ಜವಾಬ್ದಾರಿ ನಿರ್ವಹಿಸುವಳು ಹೆಣ್ಣು!
ಹೆಣ್ಣೆಂದರೆ ಸಹನೆ, ಶಾಂತಿ,ಪ್ರೀತಿ ವಿಶ್ವಾಸ
ಹೆಣ್ಣೆಂದರೆ ಮತ್ತೊಂದು ಜೀವಕೆ ಉಸಿರು ನೀಡುವಳು
ಕನಸುಗಳಿಗೆ ರೂಪವಾಗಿ,ಪದಗಳಿಗೆ ನಿಲುಕದವಳು
ಎಲ್ಲವೂ ಅವಳಿಂದಾದರೂ, ಒಂಚೂರು ಗರ್ವಪಡದವಳು!
ಪುರುಷರಿಗೆ ಸರಿಸಮನಾಗಿ ಸ್ವತಂತ್ರವಾಗಿ ಬದುಕಬಲ್ಲಳು
ಆದರೂ ಆಕೆ ನರಳುತ್ತಿದ್ದಾಳೆ ದೌರ್ಜನ್ಯದಡಿಯಲ್ಲಿ ಸಿಲುಕಿ
ಸ್ವಾವಲಂಬಿಯಾಗಿ ಬದುಕಲು ಬಿಡರು ಸಮಾಜದ ನಡುವಿನಲ್ಲಿ
ಹೆಸರಿಗಷ್ಟೇ ಮಹಿಳೆ ಒಬ್ಬಂಟಿಯಾಗಿ ಓಡಾಡಲು ಸ್ವತಂತ್ರಳು!
ತಡೆಯಬೇಕಿದೆ ಹೆಣ್ಣು ಭ್ರೂಣಹತ್ಯೆ,ವರದಕ್ಷಿಣೆ,ತಾರತಮ್ಯ,ಅತ್ಯಾಚಾರಗಳನ್ನು
ಸಮಾಜದ ಕಣ್ಣುಗಳಾಗಬೇಕಿದೆ ಮಮತೆ,ನಂಬಿಕೆ,ನೈತಿಕ ಮೌಲ್ಯಗಳು
ಹೀಗಾಗಿದ್ದಲ್ಲಿ ಮಾತ್ರವೇ ಮಹಿಳಾ ದಿನಾಚರಣೆಗೊಂದು ಅರ್ಥ
ಇಲ್ಲವಾದಲ್ಲಿ ಈ ಆಚರಣೆ ನಡೆಸುವುದು ವ್ಯರ್ಥ!
- ಪ್ರಿಯಾಂಕ
08 Mar 2023, 09:06 am
Download App from Playstore: