ಸಾಧನೆಯ ಹಾದಿ
ಸಾಧಿಸಲು ಏನಿದೆ ಈ ಜಗದೊಳು
ಹೇಳಿ ಸುಮ್ಮನಿರುವ ಮನುಜರು ದಡ್ಡರು
ಸೋತರೂ ಗೆಲುವಿಗಾಗಿ ಹಾತೊರೆದು
ಬದುಕ ಸವಿಯನ್ನು ಕಂಡವರು ಜಾಣರು!
ನೋವು-ನಲಿವು, ಸುಖ-ದುಃಖ ಹಂಚಿಕೊಂಡರೆ
ಸಾರ್ಥಕವೆನಿಸುವುದು ಬಾಳು
ಸೋತವರಿಗೂ ಬೆನ್ನುತಟ್ಟಿ, ಗೆದ್ದವರಿಗೂ ಪ್ರೋತ್ಸಾಹಿಸಿ
ನಗಿಸುತ್ತ ಮರೆಸಬೇಕು ಜನರ ಗೋಳು!
ಕನಸು ಕಾಣುವವನಿಗೆ ಗುರಿ ಮುಟ್ಟುವ ತವಕ
ಖಾಲಿ ಕುಳಿತಿರುವವನಿಗೆ ನಿದ್ದೆಯಲ್ಲಿಯೂ ದುಃಖ
ತಿಳಿದಷ್ಟು ಮತ್ತಷ್ಟು ಸಾಧಿಸುವವರಿಗೆ ತವಕ
ಯಾರಿಗೆ ಬೇಕು ಸಾಧನೆಯಿಲ್ಲದ ಸುಖ!
ನಮ್ಮೆದುರಿರುವ ದಾರಿ ಕಿರಿದಾದರೇನು
ನಮ್ಮೊಳಗೆ ಇರಬೇಕು ಸಾಧಿಸುವ ಛಲ
ಗೆಲುವಿನ ಹೆಜ್ಜೆ ಕಠಿಣವಾದರೇನು
ಸಾಧನೆಗೆ ದೊರಕುವುದು ತಕ್ಕ ಪ್ರತಿಫಲ!
- ಪ್ರಿಯಾಂಕ
06 Mar 2023, 07:05 pm
Download App from Playstore: