ಹಂಬಲ
ನಾನಡಿದ ನದಿಯ ತೀರ
ಕೈ ಬೀಸಿ ಕರೆದಿದೆ
ನಾವಾಡಿದ ಆಟವೆಲ್ಲ
ಕಣ್ಮುಂದೆ ಸರಿದಿದೆ
ಒಂದು ಎರಡು ಕಪ್ಪೆ ಚಿಪ್ಪು
ಹೆಕ್ಕಿ ಹೆಕ್ಕಿ ಮನಕೆ ಒನಪು
ನೀರಿಗೆ ಹಾರಿ ಈಜಲು
ಆಟ ಪಾಠ ಎಲ್ಲ ಸೊನ್ನೆ
ಅಮ್ಮ ಬರುವವಳು ಬೈಯ್ಯಲು
ಬಾ ಒಮ್ಮೆ ಮರಳಿ ನೀನು
ನನ್ನ ನಿ ಒಮ್ಮೆಸೇರು
ಇದೇ ನನ್ನ ಆಶಯ
ಬೇಡ ನಿನಗೆ ಸಂಶಯ
ಎಂದಿಹಳು ಪ್ರಕೃತಿ ಮಾತೆ
ನಮ್ಮ ದಾರಿ ಕಾಯುತ್ತ
- Vittal Jore
04 Mar 2023, 02:44 pm
Download App from Playstore: