ಬಂಧ ಅನುಬಂಧ
ಯಾರು ಮಾಡಿದರು ಈ ಬಂಧ..??
ಯಾರನ್ನೋ ಪ್ರೀತಿಸುವುದು ಹೃದಯದಿಂದ..
ಇನ್ಯಾರನೋ ಜೊತೆಯಾಗುವುದು ಅನುಬಂಧ...
ವಿಧಿಯಾಟಕೆ ತಲೆಬಾಗಬೇಕೆ..??
ಪ್ರೀತಿಗಾಗಿ ಹುಡುಕಬೇಕೆ..??
ಎಲ್ಲವನು ಅನುಭವಿಸುತ್ತಾ ಮುಂದೆ ಸಾಗಬೇಕು...
ಜೀವನದ ಪಯಣದಲಿ
ಸಾಕಷ್ಟು ನಿಲ್ದಾಣಗಳು..
ಎಲ್ಲಿ ಕಳೆದು ಹೋಗಿರುವರು ನಮ್ಮವರು..??
ಯಾರಿಗಾಗಿ ಅಲೆದಾಟ..
ಯಾರಿಗಾಗಿ ಪರದಾಟ..
ಪ್ರಶ್ನೆಗಳ ಹಿಂದಿದೆ ಓಟ..
ನೆನ್ನೆ ಇದ್ದವರು ಈಗಿಲ್ಲ..
ಮಾನವ ತನ್ನ ದುರಾಸೆ ಬಿಡಲಿಲ್ಲ..
ಕಾಲಗರ್ಭದಲಿ ಸೇರುವುದೆಲ್ಲ..
ತನುಮನಸು✍️
- Tanuja.K
28 Feb 2023, 09:59 pm
Download App from Playstore: