ನೀವು ನಮಗೆ ಯಾಕೆ ಅರ್ಥವಾಗಲಿಲ್ಲ ನೀವು ನಮಗ

ನೀವು ನಮಗೆ ಯಾಕೆ ಅರ್ಥವಾಗಲಿಲ್ಲ

ನೀವು ನಮಗೆ ಯಾಕೆ
ಅರ್ಥವಾಗಲಿಲ್ಲ
ಹೋರಾಡಿದಿರಿ
ಗಲ್ಲಿ ದಿಲ್ಲಿ ಸುತ್ತಿ
ಕುಳಿತಲ್ಲಿ ನಿಂತಲ್ಲಿ ನೆನದು
ಅದೇ ಊರು ಕೇರಿ ಮರೆತು
ನಮಗೆಲ್ಲ ಕನಸು ಚೆಲ್ಲಿ ಜಿಗಿದುಬಿಟ್ಟು
ಜೋಗುಳ ಹಾಡಿ ನೀವು ಬೆಳ್ಳಿ ಚಿಕ್ಕಿ
ಮೂಡಿಸಿ
ಮಗ್ಗುಲಲ್ಲಿ ಮುಳ್ಳಾಗಿ
ಮೂಲೆಗುಂಪು ಮಾಡಿ
ಅಂಗದೊಳಗೆ ಲಿಂಗವ ಹಿಡಿದು ಅನಂತದೊಳು ಮನವ
ಮಡಿಗೆ
ಮನಸೋತಿರಿ ನೀವು
ಯಾರಿಗೆ ಬೇಕು ಅಂಬೇಡ್ಕರ್
ಇರುಳಾಗುವುದನ್ನೇ ಕಾದು
ಪರದೆಯ ಮೇಲೆ ಮಾದಕ ನಗು
ಅದೆಂತಹಾ ಸೇವೆಯ ಸೋಗು ಮಿಂಚಿನ ಸಂಚಾರ
ಅದೆಂತಹ ಹೋರಾಟ
ಹಾಗೆ ಹಾಗೆ ನೀವು ದಣಿವಿಲ್ಲದ ಅಂಗ ಪೂಜೆಯೊಳಗೆ
ಲಿಂಗಪೂಜೆ ಮರೆತೇ ಹೋಯ್ತು
ಆದರೂ ಮತ್ತೇ ಮತ್ತೇ ಅಂಬೇಡ್ಕರ್
ಪ್ರತಿ ಕ್ಷಣವೂ ಸ್ಮೃತಿಯಲ್ಲಿ
ಏನು ಮಾಡಲು ಗದ್ದುಗೆ ಹಿಡಿದಿರಿ
ಏನು ಮಾಡಿದಿರಿ
ಸ್ವಯಂ ಘೋಷಿತ ಬಿರುದುಗಳು
ಬಾವಲಿಯಂತೆ ಜಾತಿ ಹೋರಾಟಕ್ಕೆ ಜೋತು ಬಿದ್ದು
ಏನಾಯ್ತು ಕೊನೆಗೆ
ಜೇನು ಮೆತ್ತಿದ ಅಲಗು
ನೆಕ್ಕಿ
ನಾಲಗೆ ಕುಯ್ದುಕೊಂಡು
ಜನ ದ್ರೋಹಿಗಳಾಗಿ
ಕರ ಪತ್ರ
ಅಯ್ಯೋ
ದೇಹ ಜೀವ
ಕೂಡುವ ಮುನ್ನ ಯೋಚಿಸಲಿಲ್ಲ ಯಾಕೆ ಮನ್ಮಥರುಗಳಾಗಿ ಬಿಟ್ಟಿರಿ
ವೈಭವವ ಹೊದ್ದು
ಗಲ್ಲಿ ಸಣ್ಣದು ಮಾಡಿ ಾದರ ಕಥೆ ದೊಡ್ಡದು
ಮರೆಯಬಾರದಾಗಿತ್ತು
ಗಲ್ಲಿ ನೀವು ಮರೆಯಬಾರದಿತ್ತು
ಅಂಬೇಡ್ಕರ್ ನಮಗೆಲ್ಲ ಗುರುವಾಗಿಬಿಟ್ಟಾಗ
ಹಾಳು ಮಾಡಿ ಹೋಳಾಗಿ
ಹಾಳಾಗಿಹೋಗಿದ್ದೇವೆ
ನೀವು ದ್ರೋಹಿಗಳಾಗಿ ಮಡಿ ಮುಡಿಯಲಿ ಮುಳುಗಿಸಿ ಮೆರೆದು ಬಿಟ್ಟಿರುವದಕ್ಕಾಗಿ
ನಿಮಗೊಂದು ನನ್ನ ಧಿಃಕಾರ ಆಯ್ತಿತು ಈಗಲಾದರೂ ಬನ್ನಿ ಸಂವಿಧಾನವ ಓದೋಣ ಹೊಸ ಬದುಕು ಕಟ್ಟಿಕೊಳ್ಳೋಣ

ಈರಣ್ಣ ಕೋಸಗಿ

- Earanna Kosagi

27 Feb 2023, 03:06 pm
Download App from Playstore: