ನಿನ್ನ ಭೇಟಿ ಯಾವಾಗ.??

ಸಣ್ಣದೊಂದು ಬೇಸರ ಮೂಡಿದೆ ನಿನ್ನ ಮೇಲೆ..
ನೆನಪಾಗುತ್ತಿಲ್ಲವೆ ನಾನು..?? ಹೇಳು ನೀನು ಈಗಲೆ..
ಯಾಕಾಗಿ ಕಾಯಿಸುವೆ ನನ್ನ ನೀನು..
ಭರವಸೆಯು ಬರಿ ಮಾತಾಯಿತೇನು..
ಸಮಯವಿಲ್ಲವೆ ನನಗೆ ಸಮಯ ನೀಡಲು..??
ಇಷ್ಟೊಂದು ನೋವೇಕೆ ನೀ ದೂರ ಇರಲು..??
ಕಣ್ತುಂಬ ನೋಡುವಾಸೆ ನಿನ್ನ..
ಸನಿಹವಾಗಲು ಏನೋ ಭಯ ಕಾಡಿದೆ ನನ್ನ..
ಕಲ್ಪನೆಯಲಿ ಕಟ್ಟಿರುವ ನಿನ್ನ ನೋಡಲು ಮನ ತವಕಿಸುತಿದೆ..
ಹಾಗಿದ್ದು ಆಗುವ ಭೇಟಿಯಲಿ ಸಣ್ಣದೊಂದು ಅಳುವಿದೆ..
ಏನಾಗಬಹುದು ನೀ ಎದುರಿಗೆ ಬಂದರೆ..??
ಪದಗಳೆಲ್ಲಿಹುದು ಬಣ್ಣಿಸಲು ಸಂತೋಷವೆ ಬರೆ....

ತನುಮನಸು✍️

- Tanuja.K

26 Feb 2023, 11:22 pm
Download App from Playstore: