ನಾನು ಪ್ರೀತಿಸುತ್ತೇನೆ
ಪ್ರೀತಿಸುತ್ತೇನೆ ನೀವು ಮಾಡಿದ ಮ
ನಾನು ಪ್ರೀತಿಸುತ್ತೇನೆ
ಪ್ರೀತಿಸುತ್ತೇನೆ ನೀವು ಮಾಡಿದ ಮೋಸ ವಂಚನೆ ಸಹಿಸಿಕೊಂಡು
ನಾನು ನುಂಗುತ್ತೇನೆ ನೀವು ಇಟ್ಟ ವಿಷ ಗೊತ್ತಿದ್ದರೂ ಸಹ
ಕುಂಡಿಗೆ ಬರೆ ಹಾಕಿದರೂ ನಂಬುತ್ತೇನೆ ನಮ್ಮವರೆಂದು, ವಿಶ್ವಾಸ ದ್ರೋಹಬಗೆದರೂ ಸಹ
ನಿಮ್ಮ ಪ್ರೀತಿ ಮಾತಲಿ ಹೂಬುನೆಟ್ಟರೂ ಮನಸಿಗೆ ಗಾಯವಾದರೂ ಸಹ
ಬಣ್ಣದ ರಂಗೋಲಿ ಹಿಂದೆ ಮುಂದೆ ಹಾಕಿದಾಗಲೂ ಸಹ
ನಾನು ಬಿಗಿದಪ್ಪಿ ಪ್ರೀತಿಸುತ್ತೇನೆ.
ಜಾತಿಯ ವಿಷ ಬೀಜ ಬಿತ್ತದಾಗಲೂ ಮೀಸಲಾತಿಗೆ ವಿಶ್ವಾಸಘಾತುಕತನ ಮಾಡಿದಾಗಲೂ ಸಹ
ನಾನು ಹೋರಾಟ ಶಕ್ತಿಯನ್ನು ಪ್ರೀತಿಸುತ್ತೇನೆ ಅಭಿಮಾನಪಡುತ್ತೇನೆ
ಅದರ ಫಲಾವಾಗಿ ಬದಲಾದ ಕಾಲಮಾನಕ್ಕೆ ನೀವು ಬದಲಾಗುವಿರಿ ಎಂದು
"ಹೋರಾಟದವಸಾಗರಕ್ಕೆ ಸಾವಿರಾರು ನದಿಗಳು' ಇರುವಾಗ ಬಗುರಿ ಆಟ ಆಡಿಸಿದಾಗ ಗುಟ್ಟು ರಟ್ಟಾಗಿ ಎಷ್ಟು ದಿನ ನೀವು ಗದ್ದುಗೆ ಏರ ಬಲ್ಲಿರೆಂದು
ಅರಿತು ಮೋಸವಾಗುವುದಿಲ್ಲವೆಂದು
ನಿಮ್ಮ ನಡುವೆ ಪ್ರತಿಭಟಿಸಿ ನಮ್ಮ ಬದುಕು ಕಟ್ಟಿಕೊಂಡು
ಮತ್ತೆ ಮತ್ತೆ ಪ್ರೀತಿಸುತ್ತೇನೆ ಪ್ರೀತಿಸುತ್ತಲೇ ಇರುತ್ತೇನೆ
ನೀವು ಬದಲಾಗುವ ತನಕ ಮನುಷ್ಯರಾಗುವ ತನಕ
ಒಂದಿಲ್ಲ ಒಂದು ದಿನ ಬದಲಾಗುವಿರೆಂಬ ನಂಬುಗೆಯಿಂದ
ಪ್ರೀತಿಸುತ್ತಲೇ ಇರುತ್ತೇನೆ
ಬಾಳೇ ಗೊನೆಯಾಗುವ ತನಕ
ಹೋರಾಟಕ್ಕೆ ಫಲದೊರೆಯುವ ತನಕ ನಾನು
ಪ್ರೀತಿಸುತ್ತಲೇ ಇರುತ್ತೇನೆ..
ಡಾ.ಈರಣ್ಣ ಕೋಸಗಿ
- Earanna Kosagi
26 Feb 2023, 01:32 pm
Download App from Playstore: