ನನ್ನ ಒಡಹುಟ್ಟಿದಾಕಿ
ನನ್ನ ಬೆನ್ನಿಗೆ ಬಿದ್ದ
ಪುಟ್ಟ ಪುಟ್ಟ ಹೆಜ್ಜೆ ಇಡುತ
ಅಳುತ ನನ್ನ ಹಿಂದೆ ಬಂದ
ಕರುಳ ಗೆಳತಿಯಿವಳು...
ಎಷ್ಟೇ ಜಗಳವಾಡಿದರು ಬೇಕಂತಲೇ ಸೋತು
ಅರೆಕ್ಷಣ ನನ್ನ ಬಿಟ್ಟಿರದ
ಮುದ್ದು ತಂಗಿಯಿವಳು...
ಎಲ್ಲವ ಕೊರಗ ಮರೆಸಿ
ಎಷ್ಟೋ ಬಾರಿ ತನ್ನ ಮಡಿಲಿನಲ್ಲಿ ಸಾಂತ್ವನ ಹೇಳಿದವಳು...
ನೋವು ಕೊಟ್ಟ ಸಾಲವನ್ನು ನಗುವಿನಲೆ ತೀರಿಸುತ
ಬದುಕ ಗೆಲ್ಲೋಣ ಬಾ ಅಣ್ಣಾ
ಎಂದವಳಿವಳು...
ತನಗಾಗಿ ಏನು ಬಯಸದ
ನನ್ನ ಬಯಕೆ ನೀನೆಂದು
ತಾಯಿಯ ಸ್ಥಾನಕೊಟ್ಟು ನನ್ನಲ್ಲೇ ಅಮ್ಮನ ಕಾಣುವವಳಿವಳು...
ಇನ್ನೇನಿದೆ ನಿನ್ನ ಬಿಟ್ಟು ಏನು ಉಳಿದಿಲ್ಲ
ಯಾವುದು ನಿನ್ನ ಹೊರತಾಗಿಲ್ಲ
ನೀನೇ ನನ್ನ ಕನಸಲ್ಲವೇ
ರೆಕ್ಕೆ ಕಟ್ಟಿ ಹಾರಲು ಬಿಡುವೆ
ಸಾದಿಸು ನಿನ್ನ ಗುರಿ ನಾನಿರುವೆ...
- Shankru Badiger
23 Feb 2023, 11:26 pm
Download App from Playstore: