ಮೊಬೈಲ್

ವಿಶ್ವವನು ಅಂಗೈಯಲಿ ಕೊಟ್ಟೆ ನೀನು..!
ನಿನಗೇನ ಕೊಟ್ಟೆನು ನಾವು..??
ನಿನ್ನಿಂದ ಹಾಳಾಯಿತೆ ಯುವ ಜನತೆಯ ಸ್ಥಿತಿ..??
ಬೆರಳ ತುದಿಯಲ್ಲೆ ಇದೆ ಎಲ್ಲ ಮಾಹಿತಿ..

ಬಳಸುವರು ನಿನ್ನನು ಖುಷಿಗಾಗಿ, ಬೇಸರ ನಿವಾರಣೆಗಾಗಿ..
ಹುಡುಕುವರು ನಿನ್ನಲ್ಲೇ ದೋಷವನು ಹೆಚ್ಚಾಗಿ..
ನಿನ್ನಿಂದ ಹಾಳಾಯಿತೆ ಮನಸ್ಥಿತಿ.??
ಸೋತ ಮನಸುಗಳಿಗೆ ನೀನೆ ಗತಿ..

ಎಷ್ಟೋ ದುಃಖಿಗಳ ಗೆಳೆಯ ನೀ..
ಎಷ್ಟೋ ಸುಖಿಗಳ ಸೆಳೆತ ನೀ..
ನೀನೊಂದು ವಸ್ತು ಮಾತ್ರ..
ನಮ್ಮಲಿನ ಭಾವನೆಗಳ ಸರದಾರ..

ಜೊತೆಯಲ್ಲಿದ್ದವರು ದೂರಾದರು ನಿನ್ನಿಂದ..
ದೂರದಲ್ಲಿರುವವರು ಹತ್ತಿರವಾಗಿರುವರು ನಿನ್ನಿಂದ..
ಸಮಯವಿಲ್ಲದಂತೆ ಆಕರ್ಷಿಸಿದ್ದು ನೀನೆ..
ಕೆಲಸ, ಕಾರ್ಯಗಳ ಕಡಿಮೆ ಮಾಡಿದ್ದು ನೀನೆ..

ಒಮ್ಮೆ ದೂರವಾಣಿಯಾದೆ, ದೂರದರ್ಶಕನಾದೆ, ಛಾಯಾಚಿತ್ರಕನಾದೆ, ಸಂದೇಶಕನಾದೆ ಮತ್ತೆ ಲ್ಲವೂ ನೀನೆ ಆದೆ,
ನಾನಾ ಪಾತ್ರಗಳ ನಿಭಾಯಿಸಿದೆ..
ಅಂತು ದಿನವಿಡೀ ನಿನ್ನನ್ನೆ ಬಳಸುವಂತೆ ಮಾಡಿದೆ..


ತನುಮನಸು✍️

- Tanuja.K

19 Feb 2023, 08:22 am
Download App from Playstore: