ಒಳಿತು ಮಾಡು ಮನೂಷ

ಮಣಿಪುರದ ಅರಸ ಮಣಿಕಂಠ ತುಂಬಾ ಬುದ್ಧಿವಂತ
ಮತ್ತು ಸತ್ಯವಂತ ಆಗಿದ್ದನು.ಅವನು ವಾಸುದೇವ ಕೃಷ್ಣನ ಪರಮಭಕ್ತ ನಾಗುವುದರ ಜೊತೆ ರವಿ ಅಸ್ತ ಕಾಲದಲ್ಲಿ ಸಂಧ್ಯಾವಂದನೆ ಮಾಡುವುದ ಮರೆಯುತ್ತಿರಲಿಲ್ಲ.ಅವನ ಪತ್ನಿ ಭಾರ್ಗವಿದೇವಿ ತುಂಬಾ ಜಾಣೆ ಮತ್ತು ರಾಧಾ ಕೃಷ್ಣರ ಪರಮ ಭಕ್ತ ಆಗಿದ್ದಳು. ಅವಳು ಯಾವಾಗಲೂ ಶಂಕರನ ಧ್ಯಾನದಲ್ಲಿ ಶಿವ ಶಿವ ಎನ್ನುತ್ತಿದ್ದಳು. ಒಂದು ದಿವಸ ಒಬ್ಬ ವಯಸ್ಸಾದ ಮುದುಕಿ ಅವರ ಅರಮನೆ ಹತ್ತಿರ ಬಂದಳು .
ಮತ್ತು ತಾಯಿ ಭವತಿ ಭಿಕ್ಷಾಂ ದೇಹಿ ಎಂದಳು
ಆಗಿ ರಾಣಿ ನಿನಗೆ ಏನು ಬೇಕು ಅಂದಳು .ಆಗ ಆಕೆ ನಿನ್ನ ಸಂಪತ್ತು ಎಂದಳು.ಆಗ ರಾಣಿ ಅರೆ ತಾಯಿ ಇದೆಲ್ಲ ನಿನ್ನದೇ ನನಗೇಕೆ ಕೇಳುವೆ ಏನಲಾಗಿ ಆ ಮುದುಕಿ ನಿಜ ರೂಪದಲ್ಲಿ ದೇವತೆ ಆಗಿದ್ದಳು.ನಂತರ ಆ ದೇವತೆ ಕರುಣಭಾವದಿಂದ ಅವಳನ್ನು ಅಪ್ಪುಗೆಯ ಅರಸಿ ನಿಂಗೆ ಏನು ವರ ಬೇಕು ಎಂದು ಕೇಳಿದಳು.ನೀನೇ ಸಾಕು ನಿನ್ನ.ದರುಷನವೆ ಸಾಕು ತಾಯಿ ಎನಲು .ಅವಳ ಕೈಗೆ ಮಾಗುವನ್ನಿತ್ತು ತಗೋ ಇದುವೇ ನಿನಗೆ ನನ್ನ ಪ್ರಸಾದ ವೆಂದು ಮಾಯವಾದಳು.


ನಿಶಾ ಅಂಜುಮ್

- Nisha anjum

13 Feb 2023, 07:42 pm
Download App from Playstore: