ನತದೃಷ್ಟ ಬದುಕು..
ಪ್ರೀತಿ ಬಂಧ ಬರೆಯಲಿಲ್ಲ ಭಗವಂತ ಹಣೆಯಲಿ..
ಸ್ನೇಹದ ನಡುವೆಯೂ ಬಿರುಸು ಮೂಡಿದೆ ಯಾಕಿಲ್ಲಿ..??
ನೀ ಬಂದುದೆ ಅದೃಷ್ಟವೆಂದು ತಿಳಿದಿದ್ದೆ ಇಷ್ಟು ದಿನ..
ನತದೃಷ್ಟ ಬದುಕು ನನ್ನದು, ನೀನು ಕೂಡ ಜೊತೆಯಗಲಿಲ್ಲ ಹೆಚ್ಚು ದಿನ...
ಹೇ ಸಮಯವೇ ಕೆಲಕಾಲ ನಿಂತುಬಿಡು..
ಮರಳಿ ಕಳೆದ ಸಮಯವ ತಂದುಕೊಡು..
ನೆನ್ನೆ ಇದ್ದ ಸಂತೋಷ ಇಂದಿಲ್ಲ..
ಬರಿ ಅಪಾರ್ಥಗಳ ನಡುವೆ ಬಂಧ ಮುಗಿಯಿತಲ್ಲ...
ಕಳೆದುಕೊಳ್ಳುವುದಾದರೆ ಯಾಕೆ ಬೇಕಿತ್ತು ನಿನ್ನ ಬರುವಿಕೆ..
ಹೇಗೋ ಇದ್ದೆ ನಾ ಕವನ ಬರೆದುಕೊಂಡು ಏಕಾಂಗಿಯಾಗೆ...
ಖುಷಿಯನ್ನು ಹಂಚಿ ದೂರ ಹೋದೆ ನೀನು..
ದುಃಖವು ಹೆಚ್ಚಾಗಿ ಶಪಿಸಿಕೊಳ್ಳುತ್ತಿರುವೆ ನನ್ನನ್ನೆ ನಾನು...
ತನುಮನಸು....✍️
- Tanuja.K
13 Feb 2023, 05:38 am
Download App from Playstore: