ಮನದ ಮಾತು ಹೇಳುವಾಸೆ
ಮನದ ಮಾತು ಹೇಳುವಾಸೆಯಾಗಿದೆ
ಆದರೇಕೊ ತಂತಾನೆ ಮೌನ ಆವರಿಸಿದೆ
ಎಷ್ಟೋ ಎಚ್ಚರವಾಗಿದ್ದೆ ನಾನು
ಕಾಲ್ಜಾರಿತು ಮನ ನಿನ್ನಲ್ಲೆ ಇನ್ನು
ನೀ ನನ್ನೊಳಗೆ ಕನಸಾದೆ, ಮನಸಾದೆ
ನಾ ಸಂಪೂರ್ಣ ನೀನಾದೆ..
ನನ್ನ ನಾ ಸುಳ್ಳಿಂದಲೇ ತುಂಬಿದ್ದೆ
ನಿನ್ನ ಪ್ರೀತಿ ಇದ್ದರೂ ಇಲ್ಲದಂತೆ ನಟಿಸಿದೆ
ಉತ್ತರ ದಕ್ಷಿಣವಾಗಿತ್ತು ನನ್ನ ಮತ್ತು ಪ್ರೀತಿಯ ಅಂತರ
ನನ್ನೇ ಮರೆತೆ ನೀ ನನ್ನೊಳಗೆ ಬೆರೆತ ನಂತರ..
ಸಾಲು ಸಾಲು ದಾರಿಗಳಿದ್ದವು ಬದುಕಿನಲಿ
ದಾರಿ ತಪ್ಪಿಯೂ ನಿನ್ನಿಂದ ದೂರಾಗೆನು ಕವನದಲಿ
ಎಷ್ಟು ಚಂದ ಈ ಒಂಟಿ ಪ್ರೇಮಕಥೆ
ನಿನ್ನಲ್ಲಿ ಅನುರಕ್ತಳಾದ ನನ್ನ ದಂತಕಥೆ...
ತನುಮನಸು..... ✍️
- Tanuja.K
29 Jan 2023, 10:54 pm
Download App from Playstore: