ನೀರೆ
ನಿದಿರೆಯಲಿ ಕಾಡುವೆ ಏಕೆ ನೀರೆ
ಕಣ್ಣೆದುರಿದ್ದರು ಯಾಕೀ ಮೌನ ಒಲವೆ...??
ಬೇಡವಾಯಿತೆ ನನ್ನೀ ಪ್ರೀತಿ
ಬದುಕಲಾರೆ ನಿನ್ನ ರೀತಿ
ಹೇಗಿರುವೆ ನೀನು ನನ್ನನಗಲಿ
ಕಲಿಸಿಕೊಡು ನೀನಿರುವ ಪರಿ
ಮನಬಿಚ್ಚಿ ಮಾತಾಡು ಒಮ್ಮೆ
ಅಪ್ಪುಗೆಯಲಿ ಬಂಧಿಸುವೆ ಸುಮ್ಮನೆ
ಸಾಕು ಗೆಳತಿ ಈ ದೂರ
ನೀ ಬೇಕು ಇನ್ನೂ ಹತ್ತಿರ
ನನ್ನ ಮನದ ದೇವತೆ ನೀನು
ಕಾಯುವೆ ಪ್ರತಿ ಜನುಮ ನಾನು...
ತನುಮನಸು.... ✍️
- Tanuja.K
29 Jan 2023, 05:28 pm
Download App from Playstore: