ನಗು ಸಹಿಸದವರ ಜೊತೆ ಜೊತೆಯಾದ ಕಥೆ
ಮನಬಿಚ್ಚಿ ಮನತುಂಬಿ ನಗುವಾಕೆ ನಾನು
ಆ ನಗುವನು ಸಹಿಸದವರ ಜೊತೆ, ಜೊತೆಯಾದೆನು
ಮಾತನೇ ಅರಿಯದ ಜನರ ಸಂತೆ ಇದು..
ಮನಸ ಮಾತು ಯಾರು ಅರಿವರು..? ಚಿಂತೆ ಇದು..
ಮಾತು ತಪ್ಪೆನು ಎಂದು ನಾನು..
ಪ್ರೀತಿಸುವುದೊಂದನೆ ಕಲಿತೆನು..
ಕಾಳಜಿಯ ಬಯಸುವುದು ಜೀವ
ಮೌಲ್ಯವಿರದವರ ಜೊತೆ ಬೆರೆಯುವುದೆ ಭಾವ..??
ತಪ್ಪನು ಸರಿಯೆಂದು ಒಪ್ಪದ ಮನಸು ನನ್ನದು
ತಪ್ಪನ್ನು ತಪ್ಪೆಂದು ಹೇಳಿದ್ದೆ ತಪ್ಪಾಯಿತಿಂದು..
ತನುಮನಸು... ✍️
- Tanuja.K
29 Jan 2023, 04:29 pm
Download App from Playstore: