ಮೌನವಾದ ಕವನ

ನನ್ನ ಕವನಗಳು ಇಂದೇಕೋ ಮೌನವಾಗಿವೆ
ಭಾವವಿಲ್ಲದೆ ಬರಿ ಪದಗಳಾಗಿವೆ

ಮರೆತು ಮರೆಯಬಹುದೇ ನಿನ್ನ
ನೆನಪು ನೆನಪಾಗದಂತೆ ಇರಬಹುದೇ ನಿನ್ನ

ಸಾಗಲು ಮುಂದೆ ಪದಗಳಿಲ್ಲ
ನೋವಲ್ಲು ನಿನ್ನದೆ ನೆನಪೆಲ್ಲ

ಕಲ್ಲಾದ ಮನಸಲ್ಲಿ ಕನಸು ಅರಳಿಸಿದೆ
ಕಣ್ಣೀರಿನ ಕವನದಲ್ಲಿ ನಿನ್ನದೆ ನೆನಪುಗಳೆ

ಹೀಗೆ ದೂರ ಸರಿಯಬಹುದೇ ನನ್ನ ತೊರೆದು
ಹೇಗಿರುವೆಯೋ ನೀ ನನ್ನ ಮರೆತು





ತನುಮನಸು..... ✍️

- Tanuja.K

29 Jan 2023, 12:44 pm
Download App from Playstore: