ಪ್ರತಿಕ್ಷಣ ನಿನ್ನ ನೆನಪು

ಕಾಣದೂರಿನ ಹೊಸ ಲೋಕದಲ್ಲಿರುವೆ ನಾನು
ದಯಮಾಡಿ ಬರಬೇಕು ನೀ ನನ್ನವನು
ಹೇಗೆ ಹೇಳಲಿ ನಾ ಎಲ್ಲವನು
ನನ್ನ ಕವನಗಳಿಗೆ ಜೊತೆಯಾದ ಜೊತೆಗಾರನ ಗುಣವನು
ಎಂತಹ ಸಂತೋಷ ನಿನ್ನ ನೋಡಲು
ಅದೇನೋ ಹೊಸತನ ನೀ ನುಡಿಯಲು
ಎಲ್ಲಿದ್ದರೂ ಆಲಿಸುವೆ ನಿನ್ನ ಮಾತನ್ನೆ
ಎಲ್ಲರೂ ಇದ್ದು ನಾ ಒಂಟಿಯಾಗಿ ಬಿಡುವೆ ನನ್ನೊಳಗೆನೆ
ಮೈ ಮರೆತು ಬಿಡುವೆ ನಿನ್ನ ಕವನಗಳಿಗಾಗಿ
ನನ್ನ ಪ್ರತಿಕ್ಷಣವು ನಿನಗಾಗಿ..

- Tanuja.K

23 Jan 2023, 05:22 pm
Download App from Playstore: