ಹೇ ಗೆಳತಿ...
ಹೇ ಗೆಳತಿ,
ನಾ ಹಾಗೆಲ್ಲ ಮನಬಿಚ್ಚಿ ನಕ್ಕವನೇ ಅಲ್ಲ !
ನಗುವಿಗೂ ನೆಪ ಹುಡುಕುವ ಜಿಪುಣ ನಾನು..
ಆದರೆ,
ನಿನ್ನ ನೆನಪು ಬಂದಾಗಲೆಲ್ಲ
ನನ್ನ ಮನಸ್ಸು
ಗರಿ ಬಿಚ್ಚಿದ ನವಿಲಂತಾಗುತ್ತದೆ !
ಇಳೆ ಸೇರಲು ಬಯಸುವ
ಮಳೆಯ ಹನಿಯಂತಾಗುತ್ತದೆ !
ಅದೆಲ್ಲೋ ಅಡಗಿದ್ದ ಕಿರುನಗು
ತುಟಿಯಂಚಿನಿಂದ ಜಿಗಿದು,
ನಿನ್ನ ಮಡಿಲು ಸೇರುತ್ತದೆ !
ಎಮ್.ಎಸ್.ಭೋವಿ...✍️
- mani_s_bhovi
22 Jan 2023, 09:57 pm
Download App from Playstore: