ಸುಮ್ಮನೆ ಜೊತೆಗೆ ಇದ್ದುಬಿಡು..
ನಕ್ಕುಬಿಡು ಒಲವೇ,
ನಾ ಹೇಳುವ ಹುಚ್ಚು ಕನಸುಗಳ
ಕೇಳುತಾ ಮೈಮರೆತುಬಿಡು !
ನೀ ಮುಡಿದ ಮಲ್ಲಿಗೆಯೂ ನಾಚುವಂತೆ
ಮನದುಂಬಿ ಅರಳಿಬಿಡು !
ನಾ ಬರೆವ ಪ್ರಾಸವಿಲ್ಲದ
ಸಾಲುಗಳಿಗೆ ಮುನ್ನುಡಿಯಾಗಿಬಿಡು,
ಕಾಣದ ನಾಳೆಗಳ ಬೆನ್ನಟ್ಟುವ
ಪಯಣದ ಸಾಥಿಯಾಗಿಬಿಡು !
ಸುಮ್ಮನೆ ಜೊತೆಗೆ ಇದ್ದುಬಿಡು...
ಎಮ್.ಎಸ್.ಭೋವಿ...✍️
- mani_s_bhovi
22 Jan 2023, 01:22 pm
Download App from Playstore: