ಪರಿಚಯ ಹೊಸದು

ನಿನ್ನ ಪರಿಚಯ ಹೊಸದು
ನಿನ್ನ ಜೊತೆ ಕನಸು ಅರಳಿರುವುದು
ಈ ಕ್ಷಣ ದೂರವಿರಬಹುದು
ನಿನ್ನ ನೆನಪೇ ಪ್ರತಿಬಾರಿ ಆಗುವುದು

ಪ್ರತಿ ಸಮಯ ನನ್ನ ಕಾಳಜಿ ಬಯಸುವೆ
ಪ್ರತಿ ಬಾರಿ ಹುಷಾರು ಎಂದು ನನ್ನ ಎಚ್ಚರಿಸುವೆ
ಹೇಗೆ ಕಲಿತೆ ನೀ ಇವೆಲ್ಲವನು
ಕಾದಿರುವೆ ನಾ ಯಾಕಾಗಿ ಬರಲಿಲ್ಲ ಇನ್ನು...

ಹೇಗಾಯಿತು ಈ ಗೆಳೆತನ ತಿಳಿದಿಲ್ಲ
ನಿನ್ನೊಡನೆ ಮಾತನಾಡಲು ಸಮಯವೇ ಸಾಲುವುದಿಲ್ಲ
ಬಹು ದೂರದ ಸುಂದರ ಗೆಳೆತನ ನಮ್ಮದು
ಶಾಶ್ವತವಾಗಿ ಉಳಿಯುವ ಸ್ನೇಹ ಸಂಬಂಧವಿದು..

- Tanuja.K

21 Jan 2023, 03:32 pm
Download App from Playstore: