ನೋವು..

ಬೇಡವೆಂದರೂ ನೀನೆ ಬೇಕು
ಎಂದು ಬರುವುದು ನೋವು..
ಸಾಕು ಎಂದರು ಬಿಟ್ಟು ಹೋಗದೆ
ಜೊತೆಯಲೇ ಇರುವುದು ನೋವು..
ಬಿಟ್ಟು ಹೋಗಬಹುದು ಒಮ್ಮೆಯಾದರು
ದೇಹಕ್ಕೆ ಆದ ನೋವು,
ಬಿಟ್ಟು ಹೋಗದೆ ಕೊನೆವರೆಗೂ
ಉಳಿಯುವುದು ಮನಸ್ಸಿಗಾದ ನೋವು..
ನಲಿವಿನ ಸುಳಿವಿಲ್ಲದೆ ಹಗಲಿರುಳು
ಕಾಡುತ್ತಿದೆ ನೋವು..
ಜೀವದ ಪರದಾಟ ಕಂಡು
ಕೈ ಬೀಸಿ ಕರಿಯುತ್ತಿದೆ ಸಾವು..
ಎಮ್.ಎಸ್.ಭೋವಿ...✍️

- mani_s_bhovi

19 Jan 2023, 09:41 pm
Download App from Playstore: