ಸ್ನೇಹಿತ

ನನ್ನೆಲ್ಲಾ ಭಾವನೆಗಳಿಗೆ ಜೊತೆಯಾದ ಜೊತೆಗಾರ
ನನ್ನ ಕವನಗಳಿಗೆ ಸ್ಫೂರ್ತಿಯಾದೆ ನೀ ನಿರಂತರ
ಮೌನದ ಒಳಗಿದ್ದ ನೋವ ತಿಳಿದೆ ನೀ
ನನ್ನ ಸಂತೋಷವನ್ನೇ ಬಯಸುತ್ತ ಸನಿಹವಾದೆ ನೀ

ನಿನ್ನ ಮಾತುಗಳ ಮತ್ತೆ ಮತ್ತೆ ಕೇಳುವಾಸೆ ನನಗೆ
ನಿನ್ನ ನಗುವಿನ ಸದ್ದು ಇಂಪು ಕಿವಿಗೆ
ಸ್ನೇಹವೆಂದರೆ ಹೀಗೂ ಇರಬಹುದೆಂದು ತಿಳಿದಿರಲಿಲ್ಲ ನನಗೆ
ಸಮಯ ಸಾಗುವುದೇ ತಿಳಿಯದು ನೀ ಇರಲು ಜೊತೆಗೆ

ಎಲ್ಲಿದ್ದೆ ನೀ ಇಷ್ಟು ವರುಷ
ಮನಸಿನ ಭಾರವ ದೂರ ಮಾಡಿದ ಸ್ನೇಹಿತ
ನಿನ್ನೊಡನೆ ಮಾತನಾಡಲು ಹಾತೊರೆಯುವುದು ಮನ
ನಿನ್ನ ಸಂದೇಶಗಳಿಗಾಗಿ ಕಾದಿರುವೆ ನಾ....

- Tanuja.K

19 Jan 2023, 05:51 am
Download App from Playstore: