ಅವ್ವ
*ಅಮ್ಮ*
ಅವಳಿಟ್ಟ ಭಿಕ್ಷೆ ನನ್ನ ಜೀವ
ಅವಳಿಟ್ಟ ಉಸಿರು ನಾನು
ಅವಳಿಟ್ಟ ಕೈತುತ್ತು ನನ್ನ ಶಕ್ತಿ
ಅವಳೇ ನನ್ನ ನಿಜ ದೇವರು!!!
ಅಮ್ಮ ಅನ್ನೋ ಪದ
ಪ್ರತಿ ಜೀವಕ್ಕೂ ಮಿಡಿತ
ಪ್ರತಿಯೊಬ್ಬರ ಹೃದಯದ
ಕಣಕಣದಲ್ಲೂ ನಾಡಿ ಬಡಿತ!!!
ಅಮ್ಮನ ತಾಳ್ಮೆಗೆ ಸರಿಸಾಟಿ ಇಲ್ಲ
ನೈಜಮೌಲ್ಯಗಳ ಹರಿಕಾರಳು
ಧೈರ್ಯಗೆಡದೆ ಮುನ್ನುಗ್ಗುವಳು
ಸಹನೆಶಿಲೆಯೂ ಇವಳು!!!
ಮಮತೆಯ ದೇಗುಲ ಅಮ್ಮ
ಮಗುವಿನ ತೊದಲು ನುಡಿ ಅಮ್ಮ
ಆಸರೆಯಾ ತೊಳೆ ಅಮ್ಮ
ತಪ್ಪನ್ನು ತಿದ್ದೋ ಜೀವವೇ ಅಮ್ಮ!!!
*
- Shankru Badiger
15 Jan 2023, 10:02 pm
Download App from Playstore: