ಸಂಕ್ರಾಂತಿ ಸುಗ್ಗಿ

ಬಂದಿತೋ ಬಂದಿತೋ ಸಂಕ್ರಾಂತಿ ಹಬ್ಬ,
ತಂದಿತೋ ತಂದಿತೋ ಮನಸ್ಸಿಗೆ ಹಬ್ಬ
ಮುಂಜಾವು ಮಂಜಿಗೆ ಅಂಜುದ ಹಬ್ಬ
ಮಬ್ಬು ಹಿಡಿದ ಮನಕೆ ಹಿಗ್ಗುವ ಹಬ್ಬ
ರಂಗೋಲಿ ರಂಗಲ್ಲಿ ರಂಗೇರೋ ಹಬ್ಬ
ಎತ್ತು ಜೋಡಿಗಳು ಓಡುವ ಹಬ್ಬ
ಮುದ್ದು ಮಕ್ಕಳ ಆಡುವ ಹಬ್ಬ
ಬಂದಿತೋ ಬಂದಿತೋ ಸಂಕ್ರಾಂತಿ ಹಬ್ಬ.

ಕಬೆಲ್ಲ ಎಳೆಲ್ಲಾ ಹಂಚುವ ಹಬ್ಬ
ಹೊಳೆಯುವ ಕಂಗಳ ಸೆಳೆಯುವ ಹಬ್ಬ
ಕದ್ದು ನೋಡುವ ಹಬ್ಬ ಹಿಗ್ಗಿ ನಲಿಯುವ ಹಬ್ಬ
ತನ್ನವರು ತನ್ನದೆಂದು ನಲಿಯುವ ಹಬ್ಬ
ತನ್ನೊಳ ಕೊಳೆಯು ತೊಳೆಯುವ ಹಬ್ಬ
ಬಂದಿತೋ ಬಂದಿತೋ ಸಂಕ್ರಾಂತಿ ಹಬ್ಬ.

ಧಾನ್ಯದ ಹಬ್ಬ ದಾನದ ಹಬ್ಬ ಹೋಮದ ಹಬ್ಬ
ಪೂಜೆಯ ಹಬ್ಬ ತಂದಿತೊ ತಂದಿತೊ ಮನಸ್ಸಿಗೆ ಹಬ್ಬ
ಮಾಗಿದ ಮನಸ್ಸಿಗೆ ಹಸಿರಾಗೋ ಹಬ್ಬ
ಬಂದ ಸಂಬಂಧಗಳಿಗೆ ಉಸಿರಾಗೋ ಹಬ್ಬ
ನಗಿಸುತ ನಲಿಯುತ್ತ ಕುಣಿದಾಡೊ ಹಬ್ಬ
ನಗುವಲ್ಲಿ ನೋವನ್ನು ಮರೆಯುವ ಹಬ್ಬ
ಬಂದಿತೊ ಬಂದಿತೊ ಸಂಕ್ರಾಂತಿ ಹಬ್ಬ.

Happy Makar Sankranti All of u

ಸ್ವಾತಿ S........



- Swati S

15 Jan 2023, 07:12 pm
Download App from Playstore: