ನಿದಿರೆ
ಕನಸ ಕಾಣಲು ಬೇಕು ನಿದಿರೆ
ಕಣ್ತುಂಬಿ ಬರಲಿ ನಿದಿರೆ
ಕಾಸ ಕೊಟ್ಟು ಖರೀದಿಸುವರು ಆಸನ
ನೆಮ್ಮದಿ ಇಲ್ಲದೆ ತುಂಬುವುದೆ ಮನ..?
ಆಯಾಸ ಓಡಿಸುವ ನಿದಿರೆ
ಸಾವನ್ನು ಪರಿಚಯಿಸುವ ನಿದಿರೆ
ನೀ ಬಂದರೆ ನೋವ ಮರೆವೆ
ನೀ ಬಾರದೆ ನೋವ ತರುವೆ..
ಸಂತೃಪ್ತಿ ಪಡೆಲು ಬೇಕು ನಿದಿರೆ
ಶಾಂತಿ ಇಲ್ಲದ ಮನಕೆ ಬರುವುದೆ ನಿದಿರೆ
ಕಲ್ಪನೆಯ ಲೋಕದಲಿ ಮರೆಯುವರು ನಿದಿರೆ
ಏಕಾಂತದಲಿ ಅಳುತ ಬಾರದು ನಿದಿರೆ...
- Tanuja.K
15 Jan 2023, 05:07 pm
Download App from Playstore: