ಕವನ ವಿಶ್ವ ಬ್ರೈಲ್ ದಿನ.

ಹಿಂದೆ ನಿರ್ಲಕ್ಷಕ್ಕೆ ಒಳಗಾದ ಅಂಧರು,
ವಿದ್ಯೆ ಪಡೆಯಲು ಅವಕಾಶವಿಲ್ಲದೆ ಹಿಂದುಳಿದಿದ್ದರೂ.
ಶಿಕ್ಷಣ ಪಡೆಯದ ಅಂಧರ ಬದುಕು,
ನಾವು ಮರೆಯಲಾಗದ ಕಣ್ಣೀರ ಕಥೆಗಳ ತುಣುಕು.
ಅಂಧರ ಕಷ್ಟವ ಕರಗಿಸೋ ಸೂರ್ಯ
ಫ್ರಾನ್ಸ್ ದೇಶದಿ ಅರಳಿತು,
ತಂದೆಯ ಕೆಲಸದಿ ಕಬ್ಬಿಣ ಹಾರಿ ಲೂಯಿಸ್
ಕಣ್ಣಿನ ದೃಷ್ಟಿಯು ಹೋಯಿತು.
ಮಗನ ಸ್ಥಿತಿಗೆ ಮರುಗಿದ ತಂದೆ,
ಸ್ಪರ್ಶದಿ ಕಲಿಯಲು ಅಕ್ಷರಗಳ ರಚಿಸಿದರಂದೆ.
ವಿಶೇಷ ಶಾಲೆಗೆ ಸೇರಿದ ಲೂಯಿ,
ಸೋನುಗ್ರಫಿ ಲಿಪಿಯ ಮೂಲಕ ಪಡೆದರು ಶಿಕ್ಷಣ,
ಅಂಧ ಮಕ್ಕಳ ಬೋಧಕರಾಗಿ ಅರಿತರು ಕಲಿಕೆಯ ಹಿನ್ನಡೆಗೆ ಕಾರಣ.
ಬಾರ್ಬಿಯರ್ ಲಿಪಿಯ ಶೋಧಿಸಿ ಬಾಲಕ,
ಬ್ರೈಲ್ ಲಿಪಿ ಸೃಷ್ಟಿಸಿದ ಮಹಾ ನಾಯಕ.
ಆರು ಚುಕ್ಕಿಗಳ ಪರಿಪೂರ್ಣ ಲಿಪಿಯು,
ಪಂಚಾಮೃತವಾಗಿದೆ ಅಂಧರ ಕಲಿಕೆಗೆ ನೀಡುತ ನೆರವು.
ಪ್ರಪಂಚದ ಅಂಧರಿಗೆ ಕಣ್ಣಾಗಿರುವ ಬ್ರೈಲ್ ಲಿಪಿ ರಚನೆ
ನೀಗಿಸಿದೆ ನಮ್ಮ ಕಲಿಕೆಗಿದ್ದ ಅಡಚಣೆ,
ಲೂಯಿಸ್ ಬ್ರೈಲ್ ಜನ್ಮ ದಿನವನ್ನು ಆಚರಿಸುವ ಎಲ್ಲರೂ ವಿಶ್ವಸಂಸ್ಥೆ ಘೋಷಿಸಿರುವ ವಿಶ್ವ ಬ್ರೈಲ್ ದಿನಾಚರಣೆ.

- nagamani Kanaka

04 Jan 2023, 05:43 pm
Download App from Playstore: