ಯಾರವಳು
ಅವಳ ಆ ಕಣ್ಣು
ಕರಿ ಕವಳಿ ಹಣ್ಣು
ನವಿಲಿನ ಗರಿ
ಆ ರೆಪ್ಪೆಗಳ ಪರಿ
ಮಳೆಬಿಲ್ಲಿನಾಕಾರ
ಕುಡಿ ಉಬ್ಬಿನವತಾರ,
ಮುಖವನ್ನೇ ಕಂಡಿಲ್ಲ ನಾನವಳದು
ಅವಳು ಮುಖಗವಸು ಹಾಕಿ ನಿಂತ ವಧು
ಅಯ್ಯೋ,
ಹೊರಟಿರುವೆ ನಾನ್ಯಾವುದೋ ಕೆಲಸಕ್ಕಾಗಿ
ಬರೆದೆ ಸಾಲುಗಳ ನನ್ನೇ ನಾ ಮರೆತು ಹೋಗಿ
ಬಂತಲ್ಲೋ ದೇವ BMTC ಬಸ್ಸು
ಏನೋ ಕೇಳಿದಳು ಇಂಗ್ಲೀಷಲಿ ಟುಸ್ಸು ಪುಸ್ಸು ಅಂತ ಹತ್ತಿ ಹೊರಟೇ ಬಿಟ್ಟಳು ಬಸ್ಸಿನ ಬಾಗಿಲು
ಕೇವಲ ಆ ಕಣ್ಣಿನಿಂದಲೇ ನನ್ನಲಿ ಈ ಕವನದ ಹೊನಲು, ಕವನದ ಹೊನಲು...
-ಸಾವರ್ಕರ ಶಂಕ್ರು ❤️
- Shankru Badiger
01 Jan 2023, 09:41 pm
Download App from Playstore: