ಹೃದಯದ ಚೋರ
ಏನನು ಹೇಳಲಿ ನನ್ನ ಮನಕದ್ದ ಗೆಳೆಯನಿಗೆ
ಹೇಗೆ ಹೇಳಲಿ ನನ್ನ ಹೃದಯದ ಚೋರನಿಗೆ
ಕಾಳಜಿಗೂ ನೀನೆ ಒಡೆಯ
ಕಾರಣವಿಲ್ಲ ಪ್ರೀತಿಗೆ ಇನಿಯ
ಒಮ್ಮೆ ನಿನ್ನ ಕೊರಳ ಬಳಸಿ ಅಪ್ಪುವಾಸೆ
ನನ್ನಲೇ ನಿನ್ನ ಸೆಳೆವಾಸೆ
ಮತ್ತೊಮ್ಮೆ ನಿನ್ನ ಎದೆಯೊರಗಿ ತಬ್ಬುವಾಸೆ
ನಿನ್ನ ಕರದಲಿ ಮುಗವಿರಿಸುವಾಸೆ
ಕಣ್ಣಲ್ಲಿ ಕಣ್ಣಿಡಲು ಒಮ್ಮೊಮ್ಮೆ ಆತಂಕ
ಏಕೆ ಹೀಗೆ ನನ್ನ ಸೇರಿರುವ ನಾಯಕ
ಮನಸಾರೆ ಮೆಚ್ಚಿರುವೆ ನೀ ನನ್ನವನು ಅನಾಮಿಕ
ಈ ತನುವಿಗೆ ಎಂದಿದ್ದರೂ ನೀನೆ ಸಖ
- Tanuja.K
24 Dec 2022, 10:35 pm
Download App from Playstore: