ಹಸಿವನ್ನು ವರ್ಣಿಸುವ ನಾನು.

* ಹಸಿವನ್ನು ವರ್ಣಿಸುವ ನಾನು *

ಹಸಿವನ್ನು ವರ್ಣಿಸುವ ನಾನು!
ಓಲೆಯ ಬೆಂಕಿ ಹಚ್ಚಲಿಲ್ಲ
ಮಾಷಣದಲ್ಲಿ ಬೆಂಕಿ ಇಟ್ಟೆ
ಮಡಿಕೆಯಲಿ ಬೂದಿ ಕೊಟ್ಟೆ.

ನಿರ್ಗತಿಕರ ಹಾಡು ಹೇಳುವ ನಾನು!
ನೆರಳಿನ ಪಾಯ ಹಾಕಲಿಲ್ಲ
ವರುಣನಾ ನೆತ್ತಿ ಮೇಲೆ ಬಿಟ್ಟೆ
ಕರುಳಿಗೆ ಕೊಚ್ಚೆ ನೀರ ಕೊಟ್ಟೆ.

ತತ್ವ ಸಿದ್ಧಾಂತ ಬೋಧಿಸುವ ನಾನು!
ಸಿದ್ಧಾಂತದ ಮಂಟಪ ಕಟ್ಟಲಿಲ್ಲ
ಪುಸ್ತಕದ ಅಳೆ ಖಾಲಿ ಬಿಟ್ಟೆ
ಹತ್ತು ಬೆರಳ ಅತಂತ್ರ ಕಾಲು ಕೊಟ್ಟೆ.

ಹೆಣ್ಣನ್ನು ಪೂಜಿಸುವ ನಾನು!
ಹೆತ್ತವಳ ಜಗನ್ಮತೆಯಂತೆ ಕಾಣಲಿಲ್ಲ
ಕಾಮದ ಕಣ್ಣಿನ ಬಾಣ ಬಿಟ್ಟೆ
ಶೋಷಣೆಯ ಸೆರಮನೆ ಕಟ್ಟಿ ಇಟ್ಟೆ.

ಎಲ್ಲವು ನನ್ನದಲ್ಲ ಎಂದು ಹೇಳುವ ನಾನು
ಮನೆ ಮಠ ಮಣ್ಣ ಬಿಡಲಿಲ್ಲ
ಭೋಗದ ಬಾಗಿಲ ಬಡಿಗಿಯಾಗಿ ಬಿಟ್ಟೆ
ನಾನು ನನ್ನದೆಂಬ ಬಾವಿಯ ತೆಗೆದುಕೊಂಡೆ....

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

23 Dec 2014, 03:16 am
Download App from Playstore: