ಒಳಗೆ
* ಒಳಗೆ *
ನವರಸಗಳ ನೋಟ ಬಣ್ಣದೊಳಗೆ
ಬಣ್ಣಗಳ ನೋಟ ಕಣ್ಣಿನೊಳಗೆ
ಕಣ್ಣು ಬಣ್ಣಗಳೆರಡು ಬುದ್ಧಿಯೊಳಗೆ
ಬುದ್ಧಿ ಮನಸ್ಸು ನಮ್ಮೊಳಗೆ
ಸೂರ್ಯನ ಬೆಳಕು ಭೂಮಿಯೊಳಗೆ
ಭೂಮಿಯ ಆಕಾರ ಬೆಳಕಿನೊಳಗೆ
ಬೆಳಕು ಭೂಮಿಗಳೆರಡು ಸೂರ್ಯನೊಳಗೆ
ಸೂರ್ಯ ಕಿರಣಗಳು ಭೂಮಿಯೊಳಗೆ
ಬರವಣಿಗೆಯ ಅಕ್ಷರ ಲೇಖನಿಯೊಳಗೆ
ಲೇಖನಿಯ ಮಸಿ ಮನಸ್ಸಿನೊಳಗೆ
ಅಕ್ಷರ ಲೇಖನಿಗಳೆರಡು ವಿಷಯದೊಳಗೆ
ವಿಷಯ ಅಕ್ಷರಗಳು ಭಾವದೊಳಗೆ
ಬದುಕಿನ ಅಂದ ಇರುವಿಕೆಯೊಳಗೆ
ಇರುವಿಕೆಯ ನಡೆ ಸ್ಪಷ್ಟತೆಯೊಳಗೆ
ಅಂದ ನಡೆಗಳೆರಡು ಧ್ಯಾನದೊಳಗೆ
ಇರುವಿಕೆ ಸ್ಪಷ್ಟತೆ ಕಾಲದೊಳಗೆ
ವಾಯುವಿನ ಜೀವ ಜೀವಿಯೊಳಗೆ
ಜೀವಿಗಳ ಜೀವ ಪ್ರಕೃತಿಯೊಳಗೆ
ಪ್ರಕೃತಿ ಜೀವಿಗಳೆರಡು ಮಂಡಲದೊಳಗೆ
ವಾಯು ಜೀವಗಳು ನಮ್ಮೊಳಗೆ
- ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
21 Dec 2014, 05:50 am
Download App from Playstore: