ಅವ್ವ ನಾ ಹೇಗೆ ಬರಲಿ ಹೊರಗೆ..

ಅವ್ವ ನಾ ಹೇಗೆ ಬರಲಿ ಹೊರಗೆ..?
ನಿನ್ನ ನೋವಿನ ರಾಗದ ಗಳಿಗೆ
ಕರಳ ಬಳ್ಳಿ ತುಂಡರಿಸಿ ಧರೆಗೆ.
ಗರ್ಭದ ಗೂಡಲ್ಲಿ ಇರುವೆ ಬೆಚ್ಚಗೆ
ಹೊರ ದೂಡಬೇಡ ಇಳೆಗೆ.

ಅವ್ವ ನಾ ಹೇಗೆ ಬರಲಿ ಹೊರಗೆ..?
ನಿ ನೋಡದೆ ಇರುವ ವಿಷಯ ಯಾವುದು?
ಹೊಟ್ಟೆಯ ಮೇಲೆ ಬರಿ, ಯೋಚಿಸುವೆ ಇಂದು
ಸೃಷ್ಟಿಯ ಮೂಲ ಅಲ್ಲವೇ ಪ್ರಶ್ನೆ ?
ಅದಕ್ಕೇ ಇಷ್ಟೊಂದು ಪರೀಕ್ಷೆ.

ಅವ್ವ ನಾ ಹೇಗೆ ಬರಲಿ ಹೊರಗೆ..?
ಎಷ್ಟೆಲ್ಲ ಭಿನ್ನ ಭಿನ್ನ ಕೊಳಕು
ಇದ್ದವರ ಅಣೆಯ ಮೇಲೆ ಸೂರ್ಯನ ಬೆಳಕು
ಕೆಲವರಿಗೆ ಚಂದ್ರನ ತೆಳುಬೆಳಕು
ಇನ್ನುಳಿದವರಿಗೆ ಅಮವಾಸೆ ಕರಿಬೆಳಕು

ಅವ್ವ ನಾ ಹೇಗೆ ಬರಲಿ ಹೊರಗೆ..?
ಪ್ರಶ್ನೆಯಿಂದ ಅಲ್ಲವೆ ಎಲ್ಲವು ಜಗದಲ್ಲಿ
ಧರ್ಮ,ದೈವ,ಮೇಲು-ಕೀಳು ಇಲ್ಲಿ
ಜಗವೆಲ್ಲ ಗಡಿ, ಮನೆ -ಮನಗಳಿಗೆ ಬೀಗ
ಆಳುವವರು, ಕೇಳುವವರು ಕಳೆದವರ ಜಾಗ

ಅವ್ವ ನಾ ಹೇಗೆ ಬರಲಿ ಹೊರಗೆ..?
ಅವ್ವಾ ಪ್ರಶ್ನೆ ಕೇಳಿದರೆ ಪ್ರಶ್ನೆಯಾಗಿಸುವರಲ್ಲ
ಅಲ್ಲಿ ನಾ ಬಂದು ಬಾಗಬೇಕ ಇಲ್ಲ ಬಾಳಬೇಕ
ಇಷ್ಟೇಲ್ಲ ಆದರೂ ಪ್ರಶ್ನೆ ?ಬೇಕ ಅನ್ನುವ ಪ್ರಶ್ನೆ
ನನ್ನನ್ನು ಪ್ರಶ್ನಿಸಲು ಹೊರತರುವೆಯ.....ಅವ್ವ

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

08 Dec 2014, 04:16 am
Download App from Playstore: