ವಾಲ್ಮೀಕಿ ಒಬ್ಬ ಬೇಡ

ವಾಲ್ಮೀಕಿ ಒಬ್ಬ ಬೇಡ
ದಾಸೀಮಯ್ಯನೊಬ್ಬ ಜಾಡ
ಕನಕನೊಬ್ಬ ಕುರಿಗಾಯಿ
ಎಂದನೊಬ್ಬ ಮೂಢ
ಹೌದು ಹೌದು ಎಂದು ಮನದಿ
ಹೇಳುತಿಹರು ಹಲವರು
ಅವರು ಜಾಣ ಕುರುಡರು
ಮಹನೀಯರ ತತ್ವವನ್ನು ಎಂದೂ ಹರಡರು

ಜಾತಿ ಜಾಡ ಹಿಡಿದುಕೊಂಡು
ಹೊರಟಿಹರು ಹಲವರು
ಜಾಡಿನಲ್ಲಿ ಮೂಢರಾಗಿ
ಸಮಾಜದಲ್ಲಿ ಕೇಡ ಹೋತ್ತಿಸಿಹರು
(ಬಿತ್ತಿದರು)

ಗಾಳಿ ನೀರು ಬುವಿಯಲ್ಲಿ
ಭೇದವಿಲ್ಲ ಜಗದಲಿ
ತಾಯ ಗರ್ಭದಲ್ಲಿ ನಾವು ನೀವು
ಒಂದೇ ಎಂಬುದು ಅರಿಯಲಿ

ಬಾಳ ಮಾವು ಸವಿದು
ಒಂದೇ ಭಾವ ಹರಡಲಿ

- ಈರಪ್ಪ ಸೊರಟೂರ

04 Dec 2014, 03:29 am
Download App from Playstore: