ಬಿಡುಗಡೆ
ಬರೆಯದ ಎಷ್ಟೋ ಸಾಲು
ಮನದಲ್ಲಿಯೆ ಉಳದಿದೆ
ಹೇಳದ ಎಷ್ಟೋ ಮಾತು
ತುಟಿಯಂಚಿನಲಿ ನಿಂತಿದೆ
ಕಣ್ಣಲ್ಲಿಯೆ ಹೆಪ್ಪುಗಟ್ಟಿರುವ
ಕಂಬನಿ ಹೊರಗೆ ಬರಲು
ತವಕಿಸುತಿದೆ
ನನ್ನ ಕಿರಿ ಬೆರಳು ನಿನ್ನ
ಬೆಸುಗೆಗೆ ಹಾತೊರೆಯುತಿದೆ
ಆದರೂ ನಾನು ಕಾಯಬೇಕಿದೆ ಇದಕ್ಕೆಲ್ಲಾ
ಬಿಡುಗಡೆ ಎಂದಿಗೆ ಎಂದು
- Rajeshwari
12 May 2016, 04:11 pm
Download App from Playstore: