ಓ ಕೋಮಲೆ
ಸೂರ್ಯ ಚಂದ್ರರೆ ನಿನ್ನ ನಯನಗಳಾಗಿ
ತಾವರೆಯೆ ನಿನ್ನ ಮೊಗವಾಗಿ
ಮಿನುಗುವ ತಾರೆಗಳೆ ನಿನ್ನ ಮುಡಿಗೆ ಹೂವಾಗಿ
ಏಳು ಬಣ್ಣಗಳ ಕಾಮನ ಬಿಲ್ಲೆ ನಿನ್ನ ಅಂದದ ಪ್ರತಿಬಿಂಬವಾಗಿ
ಸಪ್ತ ಲೋಕಗಳ ಸುಂದರಿ ನೀನಾಗಿ
ಆ ಮೇಘವೆ ನೀ ನಡೆದಾಡುವ ರತ್ನಗಂಬಳಿಯಾಗಿ
ತಾಯಿಯೊಡಲ ಮಗುವಾಗಿ
ನಿನ್ನ ನಗುವೆ ನನ್ನ ಜಗವಾಗಿ
ಚಿರಕಾಲ ನಗುತಿರು ನನ್ನ ಪಟ್ಟದರಸಿ ನೀನಾಗಿ...
- Irayya Mathad
12 May 2016, 08:50 am
Download App from Playstore: