ಅವಳು
ಅವಳ ಕಣ್ಣಂಚಿನ ಕಾಡಿಗೆ
ಏಕೊ ಇಂದು ಎಡೆಬಿಡದೆ ಕಾಡುತ್ತಿದೆ
ಅವಳ ನಗೆಯಲ್ಲೊಂದು
ಮೋಗ್ಗಿನ ಹೂ ಅರಳುವ ಹಾಗರ
ತುಟಿಯ ಅಂಚಲೊಂದು ದೃಷ್ಟಿ
ಬಟ್ಟು ಮೊಗದಲ್ಲಿ ಹೂಮಳೆ ಚಲ್ಲಿದೆ
ಕೆನ್ನೆಯ ಗುಳಿ ಕನಸನ್ನು ಕದ್ದಿದೆ
ಕಿವಿಯಲ್ಲಿ ಮಿಂಚುತ್ತಿದ್ದ
ಓಲೆಯೊಂದು ಕೂಗುತ್ತಿದೆ
ಮೂಗ ಮೇಲಿನ ಮೂಗುತಿಯೊಂದು
ಮಿಂಚಂತೆ ಮಿಣುಕುತ್ತಿದೆ
ತುಟಿಯ ಕಡಲು ನಗುವಿನ
ಹೊಳೆಯಾಗಿ ಸೇರಿದೆ..
- ರವಿಕುಮಾರ
01 May 2016, 06:29 pm
Download App from Playstore: