ನಿನ್ನ ಅಡಿದಾವರೆಗಳಲ್ಲಿ ಹೂವಾ

ಏನು ಮಾಡಲಿ ಹರಿಯೆ
ಭವದೊಳು ಬೆಂದು ನಿನ್ನ ಕಾಣಲಿಲ್ಲ
ಏತಕೆ ಈ ಜನುಮ ನಿನ್ನ ನೋಡದೆ || ಪ||

ಸಪ್ತ ಸಾಗರಗವ ದಾಟಲಾದೆ
ಸಪ್ತ ಶೃಂಗವ ಏರಲಾದೆ
ಸಪ್ತ ಲೋಕವೆ ಬೇಡವಾಗಿಹೆ
ನಿನ್ನ ನೋಡುವ ಆಸೆಯು ಇನ್ನೂ
ಮೊಳಕೆಯೊಡೆದು ಕಾಯುತಿದೆ ನಿನ್ನ

ಹನುಮನ ಹಾಗೆ ಶಕ್ತಿಯು ಇಲ್ಲ
ಅವನ ರೂಪದ ಭಕ್ತಿಯು ಮೂಡಲಿಲ್ಲ
ಅಜ್ಞಾನ ಅಂಧಕಾರ ತುಂಬಿದ ಈ ಗಡಿಗೆ
ಸೋರುವ ಮುನ್ನ ಸೋಸಲೆ ಇಲ್ಲ

ನಾನು ಎನ್ನುವ ಭೂತ ಬಡಿಯಿತಲ್ಲ
ನನ್ನದೆನ್ನುವ ಸ್ವಾರ್ಥ ತುಂಬಿತಲ್ಲ
ನಿನ್ನನರಿಯುವ ಪರಿಯ ಹುಡಕಲಿಲ್ಲ
ಹೋಗುವ ಮುನ್ನ ಏನನ್ನು ತರಲಿಲ್ಲ

ಭಕ್ತನಾಗಿಸು ಶಕ್ತನಾಗಿಸು
ಮರುಜನ್ಮ ನೀನು ಕರುಣಿಸೆನಗೆ
ನಿನ್ನ ಸೇವೆ ಮಾಡುತ ಮುಕ್ತಿಯ ಪಡೆವೆನು
ಬೇಡೆನು ಇನ್ನೂ ಬೇರೆ ವರವನ್ನು....

- Irayya Mathad

10 Apr 2016, 04:33 pm
Download App from Playstore: