ಕಾಡು

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

ಜಗನ್ಮಾತೆಯ ಜೇಷ್ಟ ಪುತ್ರನೇ,
ಸೃಷ್ಟಿ ಕ್ರಿಯೆಯ ಕ್ಲಿಷ್ಟ ಕರ್ಣನೇ,
ಹಗಲಿರುಳು ಮಾಡುವೆ ನಿನ್ನ ಸ್ಮರಣೆ,
ತೋರಿಪು ನಿನ್ನ ಅಘಾದ ಶಕ್ತಿಯನ್ನೇ.

ನಿನ್ನ ಕೆಡವಲು ಬಂದವರನ್ನು ಬೆದರಿಸು,
ನಿನ್ನ ಬೇಡಲು ಬಂದವರನ್ನು ರಕ್ಷಿಸು,
ನಿನ್ನ ವಿಕ್ರಿಯ ಮಾಡಲು ಬಂದವರನ್ನು ಶಿಕ್ಷಿಸು,
ನಿನ್ನ ನೋಡಲು ಬಂದವರನ್ನು ರಂಜಿಸು,
ನಿನ್ನ ಒಲವಿಗೆ ಬಂದವರನ್ನು ಮುದ್ದಿಸು,
ನಿನ್ನ ತಂಟೆಗೆ ಬಂದವರನ್ನು ಕಡೆಗಾಣಿಸು.

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

ಕೋಟಿ ಜೀವಿಗಳ ಜನನಿ,
ಕಟ್ಟಲೆ ಜನಗಳ ಗುಪ್ತಗಾಮಿನಿ,
ಕವಿಗಳ ಪ್ರಥಮ ಸ್ಫೂರ್ತಿ ನೀ,
ರಸಿಕರ ಅಪ್ರತಿಮ ಪ್ರೇಯಸಿ ನೀ.

ಮನುಗಳ ದೃಷ್ಟಿಯ ಹೊನ್ನಿನ ಸಿರಿ,
ಕಲೆಗಳ ಸೃಷ್ಟಿಯ ನಯನ ಪರಿ,
ಮನುಗಳ ಸ್ವಾರ್ಥಕ್ಕೆ ಬಲಿಯಾಗಬೇಡ,
ಕಲೆಗಳ ನಯನಗಳಿಗೆ ಕೊನೆಯಾಗಬೇಡ.

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

- ಅನಿಕೇತನ

30 Mar 2016, 10:29 am
Download App from Playstore: