ತಂಪಿನ ರಾತ್ರಿ

ತಿಂಗಳ ಬೆಣಕಿನ ತಂಪಿನ ರಾತ್ರಿ,
ಚಂದಿರ ಸೊಬಗಿನ ಮಲೆನಾಡ ಮೈತ್ರಿ,
ನೋಡುಬಾ ನನ್ನರಸಿ,
ಸುಂದರ ರಾತ್ರಿಯೊಳು ಒಡಲನು ಸೊಂಕಿಸಿ.

ಇಲ್ಲಿ ಬಂದು ಎನ್ನ ತಬ್ಬಿ ಕೂರು,
ತಂಗಾಳಿಯ ತಂಪಿನೊಳು ನಿನ್ನ ಪ್ರೀತಿ ಸಾರು,
ಸುತ್ತಲು ಸವರಲಿಬಿಡು ತಣ್ಣನೆ ಚಳಿಯು,
ನೀ ಎನ್ನ ಬಿಟ್ಟು ಸರಿಯದಿರೆಲ್ಲಿಯು.

ನಿನ್ನ ನವನಿತ ಸಾರದ ಕೆನ್ನೆಯ ತೋರಿಪು,
ನನ್ನ ತಣ್ಣಣೆ ತುಟಿಯದನು ಮುಟ್ಟಲು ಬಿಡು,
ನಿನ್ನ ತಣ್ಣಣೆಯ ತುಟಿಯನನಗೆ ತೋರಿಪು,
ನನ್ನ ತುಟಿಯದನು ಚುಂಬಲಿ ಬಿಡು.

ತಿಂಗಳ ಬೆಣಕಿನ ತಂಪಿನ ರಾತ್ರಿ,
ಚಂದ್ರಿಕೆ ಬಾ ಆಗಿಲಿ ನಮಗೆ ಮಲೆನಾಡಿನಲ್ಲಿ ಮೈತ್ರಿ.

- ಅನಿಕೇತನ

29 Mar 2016, 02:12 pm
Download App from Playstore: