ಮಲೆನಾಡಿನ ಮೌನ

ಕೂಗದಿರು ಕರೆಯದಿರು,
ಕುತೂಹಲದಿಂದ ಅತ್ತಿತ್ತ ಹೋಗದಿರು,
ಕುಂತವನು ನಿಲ್ಲದಿರು,
ಪಿಸುಮಾತಿನ ಸದ್ದು ಮಾಡದಿರು.

ಕಣಿವೆಯ ಕಂಡರು ಸುಮ್ಮನಿರು,
ಕಾನನದೊಳು ನೀ ಒಂದಾಗಿರು,
ಮಳೆಯಲಿ ಮಿಂದರು ನಡುಗದಿರು,
ಸುತ್ತ ಹಸುರನು ಕಂಡು ಕುಣಿಯದಿರು.

ನೀ ಏನೇ ಮಾಡಿದರು,
ಮನುಜನ ಮನದ ಮೈಲಿಗೆಯ ತಗಲಿಸದಿರು,
ಮಲೆನಾಡ ಕಾನನದ ಕಮರಿಯೊಳಿಲಿಯಲು,
ಮಲೆನಾಡ ಮೌನದಲಿ ನೀ ಒಂದಾಗಿರು.

- ಅನಿಕೇತನ

28 Mar 2016, 10:04 am
Download App from Playstore: