ಬೈಗು

ಮೇಘವು ಮರಳಿ ಬಂದಿದೆ,
ಹರುಷವು ಮನದಿ ತುಂಬಿಸಿದೆ,
ನದಿಯ ತಡಿಯಲಿ ನಿಂತಿರುವ ನನ್ನ,
ತನ್ನ ಅಂದ ಚಂದದಿ ಸೆಳೆದಿದೆ.

ನದಿಯು ಎಲ್ಲೋ ಜನಿಸಿದೆ,
ಬೆಟ್ಟದಡಿಯ ಕಮರಿನಲ್ಲಿ ಜಲಪಾತವ ಸೃಷ್ಟಿಸಿ
ಕಾನನದೊಳು ಹರಿದು ಬಂದಿದೆ.
ತನ್ನ ಅಂದ ಚಂದದಿ ನನ್ನ ಮನವ ಗೆದ್ದಿದೆ.

ಪಡುವಣದೊಳು ದಿನೇಶನು ಬಂದಿಹನು,
ಗಗನದಿ ಕುಂಕುಮ ಕೇಸರಿಯನ್ನು ಚಲ್ಲಿಹನು,
ಕಾರ್ಮೋಡದ ನಡುವೆ ತನ್ನ ಮುಪ್ಪು ಬೆಳಕನು ಸಾರುತಿಹನು.
ತನ್ನ ಅಂದ ಚಂದದಿ ನನ್ನ ಮನಸ ರಂಜಿಸಿಹನು.

ನಭದಿ ಮೇಘ ಕಾರ್ಮೂಡದಡಿಗೆ,
ದಡದಿ ನದಿಯ ವೈಯಾರದತಡಿಗೆ,
ಸಂಜೆ ಸೂರ್ಯನ ಸರಿಗೆ ನಿಂತುನಾ,
ಈ ಹಾಡ ಹಾಡಿ ಹರುಷ ಪಡುತಿಹನು.

- ಅನಿಕೇತನ

27 Mar 2016, 04:01 pm
Download App from Playstore: