ಮರೆಯಲಾಗುತ್ತಿಲ್ಲ...
ಈಗೀಗ ತೀರಾ ನೆನಪಾಗ್ತೀಯ ಕಣೇ..
ಅದೆಷ್ಟೇ
ಮುಚ್ಚಿಟ್ಟರೂ ಬಚ್ಚಿಟ್ಟರೂ
ಅದುಮಿಟ್ಟುಕೊಂಡ ನಿನ್ನೊಲವಿನ
ನನ್ನೆದೆಯ ಅಳುವನ್ನು, ಮುಂಜಾನೆ
ಹೊದ್ದ ಹೊದಿಕೆಯ ಮೈಗೆ ನಿನ್ನ
ನೆನೆವ ಭಾವುಕತೆಯಿಂದ ಉಕ್ಕಿಬರುವ
ಕಣ್ಣೀರ ಸ್ಪರ್ಶವ ಕೊಟ್ಟು, ನನಗೆ
ಗೊತ್ತಿಲ್ಲದಂತೆಯೇ ಅದರೊಂದಿಗೆ
ನನ್ನೆಲ್ಲಾ ನೋವನ್ನ ಹೇಳಿಬಿಡುವಷ್ಟು
ಎಷ್ಟೇ ಹಾದಿ ಬದಲಿಸಿ ನಡೆಯಲು
ಪ್ರಯತ್ನಿಸಿದರೂ, ತಿರುಗಿ ಬಂದು
ನನ್ನೆದೆಯ ಕದವನ್ನೇ ಬಡಿಯುವ
ನಿನ್ನ ನೆನಪುಗಳನ್ನು ಅಪ್ಪಿಕೊಳ್ಳದೆ
ತೊರೆಯಲಾಗುತ್ತಿಲ್ಲ ಕಣೇ
ಕರುಣೆಯಿಲ್ಲದ ಕಾಲವು ಕಸಿದುಕೊಂಡ
ನನ್ನೆಲ್ಲಾ ಖುಷಿಯನ್ನು ಬೇಡಲೂ ಆಗುತ್ತಿಲ್ಲ
ಕಂಗೆಡಿಸಿ ಕೊಲ್ಲುವ ನಿನ್ನ ನೆನಪುಗಳು
ನಿನ್ನಷ್ಟೇ ಮೊಂಡು ಕಣೇ
ನಿನ್ನ ಬೆಚ್ಚನೆಯ ಒಲವಿನ ಸಂಗಡವನ್ನಷ್ಷೇ
ಬಯಸಿದ ಈ ಬಡಪಾಯಿ ಜೀವಕ್ಕೆ
ತಬ್ಬಲಿತನದ ಬಿಸಿಮುಟ್ಟಿಸಿದ ಕಾಲವನ್ನು
ಶಪಿಸಲು ಆಗುತ್ತಿಲ್ಲ, ನನ್ನೊಳಗಿನ ನಿನ್ನ
ನಿನ್ನೊಳಗಿನ ನನ್ನ ಮರೆತು
ಜೀವಿಸಲೂ ಆಗುತ್ತಿಲ್ಲ. 'ನಾನ'.
-ಶ್ರೀನಾಥ್ ಪಿ ವಿಜಿ
- ಶ್ರೀನಾಥ್ ಪಿ ವಿಜಿ
18 Mar 2016, 09:45 pm
Download App from Playstore: