ಚುಂಬನ
ಬೆಳದಿಂಗಳ ಬಾಲೆ ಎತ್ತ ಸುಳಿದೆ
ಕನಸಿನ ಚಂದಿರ ಆಗಸದ ತುಂಬೆಲ್ಲ
ನಸುನಗುತ್ತ ಹರಡಿದನು
ಮಲ್ಲಿಗೆಯ ಪರಿಮಳದೊಡನೆ ಮೆಲ್ಲಗೆ
ಬೆಳದಿಂಗಳ ನಡುವೆ ಕಾವ್ಯ ಚಂದ್ರಿಕೆಯಾಗಿ ಎದೆಗಿಳಿದೆ
ಸಾಗರದ ಕಡಲಂಚಿನಿಂದ ದೂರಾದ ಚಂದಿರನು
ನಕ್ಷತ್ರಗಳ ಚುಮ್ಮಿಸಿ ಕಡಲಲ್ಲಿ ಲೀನವಾದನು.
ಬೆಳದಿಂಗಳಿಗೆ ಕೊರತೆಯಿತ್ತು
ನಕ್ಷತ್ರಗಳ ಚುಂಬಿಸೋ ಆಸೆಯ ತುಟಿಗಿಳಿಯಿತು...
-ಕನ್ನಡಿಗ ರವಿಕುಮಾರ
- ರವಿಕುಮಾರ
14 Mar 2016, 06:08 pm
Download App from Playstore: