ಕರುನಾಡ ಸೇವಕ

ನಮಸ್ತೆ ಅಬಿಮಾನಿಗಳೇ ವಂದನೆ ಒಡನಾಡಿಗಳೇ
ನಾ ನಿಮ್ಮ ಸ್ನೇಹಿತನು ಸಿರಿ ಕನ್ನಡ ಸೇವಕನು

ಕರುನಾಡ ಸ್ನೇಹಿತರೆ ನನ್ನ ಬೆಳೆಸಿದ ದೇವರು
ಸಿರಿ ಕನ್ನಡ ತಾಯಿಯು ಬೆಳೆಸಿ ಹರಸಿದಳು
ನಾ ನಿಮ್ಮ ಮನಸಲ್ಲಿ ಮನೆಮಾಡಿ ಹಾರುವೆ
ನಾ ನಿಮ್ಮ ಹೆಸರಲ್ಲಿ ದ್ವನಿಮಾಡಿ ಹಾಡುವೆ
ಕರ ಎತ್ತಿಕೈಮುಗಿವೆ ನಾ ಕರುನಾಡ ಸೇವಕ

ಕಷ್ಟವನ್ನು ದೂರ ಮಾಡಿ ಒಗ್ಗಟ್ಟಿನಿಂದ ದುಡಿಯುವ
ಸುಖವನ್ನು ಹಂಚಿಕೊಂಡು ನಕ್ಕು ನಲಿದು ಬಾಳುವ
ಜಾತಿ ದರ್ಮವೆಲ್ಲ ಮರೆತು ಕರುನಾಡ ಕಟ್ಟುವ
ನ್ಯಾಯ ನೀತಿ ಸತ್ಯ ಎಂಬ ನಾಡಕಟ್ಟಿ ಮೆರೆಯುವ



ನಾಗರಾಜ ಎಸ್ ಎಲ್
ಸಂತೆಕೊಪ್ಪ
ತೀರ್ಥಹಳ್ಳಿ

- ನಾಗರಾಜ ಎಸ್ ಎಲ್ ಸಂತೆಕೊಪ್ಪ

12 Mar 2016, 02:51 am
Download App from Playstore: