ಹಂಬಲ

ನಿನ್ನ ಕುಡಿನೋಟಕ್ಕಾಗಿ
ಕಾದು ಕಾದು ಕವಿತೆಯಾಗಿ
ಅಕ್ಷರಗಳಲ್ಲಿ ಅಡಗಿ ಹೋಗಿ
ಪುಸ್ತಕ ಸೇರಿರುವೆ....
ನೀ ಪುಟ ತೆರೆದು ನೋಡಲೇ ಇಲ್ಲ

ನಿನ್ನ ಸವಿ ಸ್ಪರ್ಶದ
ಸೆಳೆತಕ್ಕೆ ಸಿಲುಕಿ
ಸೋತು ನಿಂತಿರುವೆ....
ನೀ ಕೈಹಿಡಿದು ಕರೆದೋಯ್ಯಲೇ ಇಲ್ಲ

ನಿನ್ನ ಪ್ರೀತಿಯ ಬೆಚ್ಚಗಿನ ಭಾವದಲ್ಲಿ
ಮಿಂದೇಳಬೇಕೆಂದು
ಧರೆಯಾಗಿ ಕಾದೆ.....
ನೀ ಮೋಡ ಬಿಟ್ಟು ಹೊರಬರಲೇ ಇಲ್ಲ

ನನ್ನಿಂದ ತಪ್ಪಿಸಿಕೋಬೇಡ...
ನಾ ಬೇಡವಾದರೇ ಹೇಳಿಬಿಡು.
ಕವಿತೆಯಾಗಿ ಕಾಡದೇ..ನಿನ್ನೆಡೆಗೆ ಕೈಚಾಚದೇ...
ಧರೆಯಾಗಿ..ನಿನಗಾಗಿ ಬಾಯಿಬಿಡದೆ...

ನೀನು ಬದುಕಲು ಬೇಕಾಗಿರುವ
ಪಂಚಭೂತಗಳಲ್ಲಿ ಲೀನವಾಗಿ...
ನಿನ್ನ ಪ್ರತಿ ಉಸಿರಿಗೇ...ಕಾರಣವಾಗಿಬಿಡುವೆ...
ನೀ ಕೊನೆ ಉಸಿರೆಳೆಯುವವರೆಗೆ..
ನನಗಾಗಿ ಹಂಬಲಿಸುವಂತಾಗುವೆ.

- ನಿಮ್ಮಿ

01 Dec 2014, 04:01 pm
Download App from Playstore: