ಮೋಹಕತೆ
ಮೆಲ್ಲನೆ ಬಂದು..ಬೆನ್ನ ಮೇಲೆ
ಮುತ್ತಿಡುವ ತಂಗಾಳಿಗೆ...
ತುಂಟತನ ಕಲಿಸಿದ್ದು...ನೀನಿರಬೇಕು.
ಏನೂ ಕಾಣದ ಕತ್ತಲೆಗೆ..
ಕನಸು ಕಟ್ಟಿಕೊಡುವ ಕಲೆ..
ನೀ ಹೇಳಿರಬೇಕು.
ಮಿನುಗುವ ನಕ್ಷತ್ರಗಳಲ್ಲಿ...ಅಡಗಿರುವ ಮೋಹಕತೆ..
ನಿನ್ನದೇ ಇರಬೇಕು
- ನಿಮ್ಮಿ
01 Dec 2014, 03:38 pm
Download App from Playstore: