ಸಂಬಂಧ


ಅದು ಸಂಬಂಧ.
ಬೀಜಗಳು ಭುವಿಯೊಡಲ
ಸಂಧಿಸುತ ಕಸಿಯೊಡೆದು,
ನಲುಮೆಯಲಿ ನಿಲುವನ್ನ
ಪಡೆದು ಬೀಗುವ ರೀತಿ

ನೆನಪುಗಳು ನೆಪವಾಗಿ
ಕಣ್ಣೆರಡು ಬೆವೆತಿರಲು
ಕರಗುತಿಹ ಕಣ್ಣೊಡಲ ,ಕೆನ್ನೆ
ಹೊತ್ತು ಹರಸುವ ರೀತಿ

ಏಳುಬೀಳುತ ಕಂದ
ಕಣ್ಮುಂದೆ ಕೊಸರಿರಲು
ತಾಯ್ಮನದ ಕೈಚಾಚಿ
ಎತ್ತಿ ಎದೆಗವಚೊ ರೀತಿ

ಸೂರ್ಯ ಚಿಲುಮೆಗಳನಪಹರಿಸಿ
ನಿಶೆಜೀವಿ ನೆರಳುಗಳ
ಪ್ರಖರಿಸುತ ಪೌರ್ಣಮಿಸಿ
ಜೀವಗಳ ಎದೆಯಲ್ಲಿ
ಚಂದ್ರನಾಗುವ ರೀತಿ

ಮತ್ತೆ ಹುಟ್ಟುವ ಖುಷಿಗೆ
ಸತ್ತು ಕರಗುವ ಉಸಿರ
ಮತ್ತೆ ಮೆತ್ತಗೆ ಪರಿಸರವು ತನ್ನ
ಶ್ವಾಸಗರ್ಭಕೆ ಸೇರಿಸುವ ರೀತಿ

ಕಾಲು ಮೆಟ್ಟಿದುದು ಭೂಮಿ
ಕಣ್ಣು ನಿರುಕಸಿದ್ದೇ ನಭ
ಸಲುಗೆ ಬೆಸೆದಿದೆ ಬಾಹುಬಂಧ
ಇಷ್ಟೆಮುಗಿಯಿತೇ ಸಂಬಂಧ ...??

...

- Balachandra

01 Mar 2016, 09:41 am
Download App from Playstore: