ಏಕಾಂಗಿ ಪಯಣ
ಹುಟ್ಟಿದ ಊರನ್ನು ಬಿಟ್ಟು
ಬದುಕಿನ ಬಂಡಿ ಕಟ್ಟಿ ನೆಡದೆಲ್ಲೋ ನೀನು !!ಪ!!
ತಂದೆ ತಾಯಿಯ ಬಿಟ್ಟು
ಅಕ್ಕ ತಂಗಿ ಅಣ್ಣ ತಮ್ಮನ ಅಗಲಿ ನೀ ಇಂದು ನಡದೆಲ್ಲೋ
ಆಡಿದ ಆ ಆಟ ಗೆಳೆಯರ ಮೋಜಿನಾಟ
ಅಳಿಯದ ನೆನಪುಗಳ ಗಂಟು ಹೊತ್ತೆ ನೀನು
ಒಂದೆಜ್ಜೆ ಮುಂದೆ ಸಾಗಿ ಮುಂದೊಂದು ಹೆಜ್ಜೆ ಇಟ್ಟು
ಹೆಜ್ಜೆ ಗುರುತನ್ನು ನೀನು ಕಾಣದಾದೆಯೊ
ಸಾವಿರ ಕನಸು ಕಟ್ಟಿ ನನಸಾಗಿಸೊ ಆಸೆ ಇಟ್ಟು
ಅರಿಯದ ಊರಿಗೆ ಹೊಂಟು ನಿಂತೆಯಲ್ಲೊ ನೀನು
ಬೆಳಗುವ ಸೂರ್ಯ ಕೋಳಿಯ ಕೂಗು ಕಿವಿಯ ನಾದ ತುಂಬಿ ನೆನಪಾಯಿತಲ್ಲೊ ನಿನಗೆ
ಬೆಳದಿಂಗಳೂಟ ಅಮ್ಮನ ಪ್ರೀತಿ ಮಾತು
ನಿನ್ನ ಕಣ್ಮುಂದೆ ಕಟ್ಟಿದಂತಾಯಿತು
ಅಪ್ಪ ಕಲಿಸಿದ ಸೈಕಲ್ ಗೆಳೆಯರ ಜೊತೆಗಿನ
ಈಜು ಕಲಿಯುವಾಗ ನೀರು ಕುಡಿದ ನೆನಪಾಯಿತು ನಿನಗೆ
ಕದ್ದು ಮುಚ್ಚಿನ ಆಟ ಆಡುವಾಗ ನೀ ಕಳೆದೆ
ಗೆಳೆಯರ ಆಶ್ಚರ್ಯ ಬೆರಗುಗೊಳಿಸಿದೆ ನೀನು
ಜಾತಿ ಧರ್ಮ ಇಲ್ಲ ನಿನಗೆ
ಕೂಡಿ ಬಾಳ್ವೆ ಹಿರಿಮೆಯೊಂದೆ
ಒಂದೆ ತಟ್ಟೆಯೊಳಗೆ ಗೆಳೆಯರ ಜೊತೆಯೂಟ
ಮರೆಯದಾಯಿತು ನಿನಗೆ ಮರೆಯದಾಯಿತು ನಿನಗೆ
ಜೇನುಗೂಡಿನ ಹಾಗೆ ಇದ್ದ ನಿನ್ನ ಬಂಧುಗಳ
ಪೊರೆಯನ್ನು ಕಳಚಿ ಒಂಟಿಯಾಗಿ ನೀ ನಡೆದೆ
ಹೊಸ ಗೂಡು ಹೊಸ ತಾಣ ಹೊಸ ಜನ ಹೊಸ ಮನ
ತುಂಬಿತೊ ಎದೆಯೊಳಗೆ ಅಂಜಿಕೆಯಾ ಅಳಕು
ಬೆರೆಯಲು ಹೋದೆ ಬೆರೆತು ಬಾಳಿದೆ ಕೊನೆಯಲಿ
ಉಳಿಯಿತು ನಿನ್ನವರ ನೆನಪು ನಿನಗೆ.....
- Irayya Mathad
25 Feb 2016, 08:17 am
Download App from Playstore: